ತ್ರಿಶೂರ: ಬಿಜೆಪಿ ಅಭ್ಯರ್ಥಿ ಆಯ್ಕೆಯಾದ ಬಗ್ಗೆ ವಿವಾದ!
ತ್ರಿಶೂರ (ಕೇರಳ) – ಕೇರಳದಲ್ಲಿ ಪ್ರಥಮ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ತ್ರಿಶೂರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದಾರೆ. ಜೂನ್ 7ರಂದು ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ಪರಸ್ಪರ ಕೋಲುಗಳಿಂದ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 20 ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಜೋಸ್ ವಲ್ಲೂರು, ಪ್ರಧಾನ ಕಾರ್ಯದರ್ಶಿ ಸಂಜೀವನ್ ಕುರಿಚಿರಾ ಉಪಸ್ಥಿತರಿದ್ದರು. ಈ ಸೋಲಿಗೆ ಸಂಜೀವನ್ ಕುರಿಚಿರಾ ಅವರು ಜಿಲ್ಲಾಧ್ಯಕ್ಷ ಜೋಸ್ ವಲ್ಲೂರ್ ಹಾಗೂ ಕಾಂಗ್ರೆಸ್ ನ ಮಾಜಿ ಸಂಸದ ಟಿ.ಎನ್. ಪ್ರತಾಪನ್ ಅವರನ್ನು ಹೊಣೆಗಾರರೆಂದು ಆರೋಪಿಸಿದರು. ಈ ಆರೋಪದಿಂದ ಜಿಲ್ಲಾಧ್ಯಕ್ಷ ಜೋಸ್ ವಲ್ಲೂರ್ ಮತ್ತು ಅವರ ಬೆಂಬಲಿಗರು ಆಕ್ರೋಶಗೊಂಡರು. ಇದಾದ ಬಳಿಕ ಕಾರ್ಯಕರ್ತರ ನಡುವೆ ಹೊಡೆದಾಟ ಶುರುವಾಗಿದೆ. ಕಾರ್ಯಕರ್ತರು ಸಂಜೀವನ್ ಅವರನ್ನು ಥಳಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಜೀವನ್ ಅವರು ಜೋಸ್ ವಲ್ಲೂರ್ ಮತ್ತು ಅವರ 19 ಸಹಚರರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಸಂಪಾದಕೀಯ ನಿಲುವುಇದು ಗಾಂಧಿವಾದಿ ಮತ್ತು ಅಹಿಂಸಾವಾದಿ ಕಾಂಗ್ರೆಸ್ ! ಇಂತಹ ಕಾಂಗ್ರೆಸ್ ಹಿಂದೂ ಸಂಘಟನೆಗಳನ್ನು ‘ತಾಲಿಬಾನ್’ ಎಂದು ಕರೆಯಲು ಯತ್ನಿಸುತ್ತದೆ! |