Samajawadi Party UP Rally : ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಗೆದ್ದ ಸಂಸದ ಬೆಂಬಲಿಗರ ಮೆರವಣಿಗೆಯಲ್ಲಿ ಗೊಂದಲ !

ಬೆಂಬಲಿಗರ ವಿರುದ್ಧ ದೂರು ದಾಖಲು

ಸಮಾಜವಾದಿ ಪಕ್ಷದ ಅಭ್ಯರ್ಥಿ ಇಕ್ರ ಹಸನ್

ಲಕ್ಷ್ಮಣಪುರಿ – ಶಾಮ್ಲಿ ಜಿಲ್ಲೆಯ ಕೈರಾನಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಇಕ್ರ ಹಸನ್ ಗೆಲುವು ಸಾಧಿಸಿದ್ದಾರೆ. ಅವರು ಬಿಜೆಪಿಯ ಪ್ರದೀಪ್ ಚೌಧರಿ ಅವರನ್ನು ಸೋಲಿಸಿದರು. ಜೂನ್ 4 ರಂದು ಫಲಿತಾಂಶ ಪ್ರಕಟವಾದ ನಂತರ ಇಕ್ರಾ ಹಸನ್ ಅವರ ನೂರಾರು ಬೆಂಬಲಿಗರು ವಿಜಯೋತ್ಸವ ಮೆರವಣಿಗೆ ನಡೆಸಿದರು. ಆ ವೇಳೆ ರಸ್ತೆಯಲ್ಲಿ ಗೊಂಧಲ ಸೃಷ್ಟಿಸಿದ್ದರು. ಈ ಗೊಂಧಲದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಪೊಲೀಸರು 110 ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದು, ಅವರನ್ನು ಗುರುತು ಹಿಡಿಯುವ ಪ್ರಯತ್ನ ಆರಂಭಿಸಿದ್ದಾರೆ.

1. ಪೊಲೀಸ್ ಉಪನಿರೀಕ್ಷಕ ವಿನಯ್ ಕುಮಾರ್ ಅವರು ತಮ್ಮ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ಮೆರವಣಿಗೆಯಲ್ಲಿನ ಗೊಂದಲವನ್ನು ಉಲ್ಲೇಖಿಸಿ ಜೂನ್ 8 ರಂದು ಪೊಲೀಸ್ ಠಾಣೆಗೆ ವಿಡಿಯೋ ಬಂದಿದೆ ಎಂದು ಹೇಳಿದ್ದಾರೆ. (ಪೊಲೀಸರು ಕೈಯಲ್ಲಿ ಇಷ್ಟು ದೊಡ್ಡ ವ್ಯವಸ್ಥೆಯನ್ನು ಹೊಂದಿರುವಾಗಲೂ ವಿಡಿಯೋದಿಂದ ಗೊಂಧಲದ ಮಾಹಿತಿ ಪಡೆಯುತ್ತಾರೆ, ಇದು ನಾಚಿಗ್ಗೇಡು ! -ಸಂಪಾದಕರು)

2. ವೀಡಿಯೋದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲವರು ಗಲಾಟೆ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಂಡು ಬಂದಿದೆ. ದ್ವಿಚಕ್ರ ವಾಹನ ಸವಾರರು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡುತ್ತಿರುವುದು ಕೂಡ ಕಂಡುಬಂದಿದೆ.

3. ಚುನಾವಣೆ ಕಾಲದಲ್ಲಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ಬೆಂಬಲಿಗರ ಈ ವರ್ತನೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ನ ಮುಸ್ಲಿಂ ಸಂಸದರ ಬೆಂಬಲಿಗರಿಂದ ಗೊಂದಲ
ಕೆಲ ದಿನಗಳ ಹಿಂದೆ ಶಾಮ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ಸಹರಾನ್‌ಪುರ ಜಿಲ್ಲೆಯಲ್ಲೂ ಇದೇ ರೀತಿಯ ಪರಿಸ್ಥಿತಿ ಬಹಿರಂಗವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಜನರು ಬೀದಿಗಿಳಿದು ಗೊಂದಲ ಸೃಷ್ಟಿಸಿದರು. ಕಳ್ಳರು ಮಹಿಳೆಯರ ಮುಂದೆ ಅಶ್ಲೀಲ ಸನ್ನೆಗಳನ್ನೂ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಗುರುತಿಸಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.