Statement from Prashant Kishore: ‘400ಕ್ಕೂ ಹೆಚ್ಚು ಸೀಟು ಲಭ್ಯವಾಗಲಿದೆ’ ಈ ಘೋಷಣೆಯಿಂದ ಬಿಜೆಪಿಗೆ ನಷ್ಟ !

ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ದಾವೆ

ಪಾಟಲಿಪುತ್ರ (ಬಿಹಾರ) – ಲೋಕಸಭಾ ಚುನಾವಣೆಯ ಚುನಾವಣೋತ್ತರ ಪರೀಕ್ಷೆಯಲ್ಲಿ, ಹೆಚ್ಚಿನವರು ಬಿಜೆಪಿ ನೇತೃತ್ವದ ಮೈತ್ರಿಕೂಟ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದರು; ಆದರೆ ವಾಸ್ತವವಾಗಿ ಈ ಮೈತ್ರಿಕೂಟಕ್ಕೆ ಸಿಕ್ಕಿದ್ದು ಕೇವಲ 292 ಸ್ಥಾನಗಳು. ಮುನ್ಸೂಚಕರಲ್ಲಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಕೂಡ ಇದ್ದರು. ಇದೀಗ ತಮ್ಮ ತಪ್ಪು ಲೆಕ್ಕಾಚಾರಕ್ಕೆ ಕ್ಷಮೆಯಾಚಿಸಿ ಚುನಾವಣಾ ಫಲಿತಾಂಶದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಬಿಜೆಪಿಯ ‘400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ’ (ಅಬ್ ಕಿ ಬಾರ್ 400 ಪಾರ್) ಎಂಬ ಘೋಷಣೆಯಿಂದ ಅದಕ್ಕೆ ಹಾನಿ ಎಂದಿದ್ದಾರೆ.

ಕಾರ್ಯಕರ್ತರು ಮತ್ತು ಮತದಾರರು ಇಬ್ಬರಲ್ಲಿಯೂ ಅಸಮಾಧಾನ ಇತ್ತು !

‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಇವರು, ಬಿಜೆಪಿಯ ದೊಡ್ಡ ದೌರ್ಬಲ್ಯವೆಂದರೆ ಅದು ಮೋದಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದರು ಎಂದು ಹೇಳಿದ್ದಾರೆ. 400ಕ್ಕೂ ಹೆಚ್ಚು ಸ್ಥಾನ ಪಡೆಯುತ್ತೇವೆ ಎಂಬ ಘೋಷಣೆಗೆ ಕಾರ್ಯಕರ್ತರು ನಂಬಿದ್ದರು. ಇಷ್ಟು ಸೀಟುಗಳು ಬರುತ್ತವೆ ಎಂದುಕೊಂಡರು. ‘ಈಗ ನಮ್ಮ ಸಂಸದರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಮತದಾರರು ನಿರ್ಧರಿಸಿದ್ದರು. ನಾನು ನನ್ನ ಚುನಾವಣಾ ಕ್ಷೇತ್ರದ ಚಿತ್ರಣವನ್ನು ಹೇಳುತ್ತಿದ್ದೇನೆ. ಬಿಹಾರದ ಅರಾದಿಂದ ಆರ್.ಕೆ. ಸಿಂಗ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರ ಬಗ್ಗೆ ಯಾರನ್ನೇ ಕೇಳಿದರೂ ‘ಸಿಂಗ್ ಒಳ್ಳೆ ಕೆಲಸ ಮಾಡಿದ್ದಾರೆ, ಮಂತ್ರಿಯಾಗಿಯೂ ಚೆನ್ನಾಗಿದ್ದರು’ ಎನ್ನುತ್ತಾರೆ; ಆದರೆ ಕಾರ್ಯಕರ್ತರಲ್ಲಿ ಏಕೆ ಅಸಮಾಧಾನವಿತ್ತು ? ಏಕೆಂದರೆ ಅವರು ಕಾರ್ಯಕರ್ತರ ಕಾಳಜಿ ವಹಿಸುತ್ತಿರಲಿಲ್ಲ. ಬಿಜೆಪಿಯನ್ನು ಬೆಂಬಲಿಸುವ ಜನರು, 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತಾರೆ ಎಂದು ಭಾವಿಸಿದ್ದರು, ಆದರೆ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಎಂದು ಘೋಷಿಸಿದ್ದರಿಂದ ಭಾಜಪ 400 ಗಡಿ ದಾಟಬಹುದು ಎಂದುಕೊಂಡಿದ್ದರು. ವಾರಣಾಸಿಯ ಮತ ಎಣಿಕೆಯಲ್ಲಿ ಮೋದಿ ಆರಂಭದಲ್ಲಿ ಹಿಂದೆ ಬಿದ್ದಿದ್ದರು. 2014ಕ್ಕೆ ಹೋಲಿಸಿದರೆ ಅವರ ಮತಗಳಿಕೆ ಶೇ.2ರಷ್ಟು ಕಡಿಮೆಯಾಗಿದೆ. ಕಳೆದ ಬಾರಿ ಮೋದಿ ಎದುರಾಳಿಯ ಮತಗಳ ಪ್ರಮಾಣ 20.9 ಆಗಿತ್ತು. ಈ ಬಾರಿ ಶೇ.41ರಷ್ಟಿತ್ತು. ವಾರಣಾಸಿಯ ಮತದಾರರು ‘ಮೋದಿ ಅವರನ್ನು ತಡೆಯಲು ಬಯಸುತ್ತಿದ್ದಾರೆ’ ಎಂದು ಭಾವಿಸಿದ್ದರು.

ಸೌಜನ್ಯ : India Today

ತಪ್ಪು ಅನುಮಾನಗಳಿಂದ ರಾಜಕೀಯ ತಿಳುವಳಿಕೆ ಕೊನೆಗೊಳ್ಳುವುದಿಲ್ಲ !

ಪ್ರಶಾಂತ ಕಿಶೋರ್ ಇವರು, 2024 ರಲ್ಲಿ ಬಿಜೆಪಿ 303 ಅಥವಾ ಅದಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೆ ಮತ್ತು ಕಾಂಗ್ರೆಸ್ 100 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಕಿಶೋರ್, ನನ್ನ ಭವಿಷ್ಯ ತಪ್ಪಾಗಿದೆ ಎಂದು ನಾನು ಒಪ್ಪುತ್ತೇನೆ; ಆದರೆ ಹಿಗೂ ಸಂಭವಿಸಬಹುದು. ಅಖಿಲೇಶ್ ಯಾದವ್, ಅಮಿತ್ ಶಾ ಕೂಡ ನಾನಾ ಭವಿಷ್ಯ ನುಡಿದಿದ್ದಾರೆ. ಅದೂ ಕೂಡ ತಪ್ಪಾಯಿತು. ಇದರ ಅರ್ಥ, ಮುನ್ಸೂಚಕರು ತಮ್ಮ ರಾಜಕೀಯ ಜಾಣತನವನ್ನು ಕಳೆದುಕೊಂಡಿದ್ದಾರೆ ಎಂದಲ್ಲ. ‘ಮಧ್ಯಪ್ರದೇಶದಲ್ಲಿ ನಮ್ಮ ಸರ್ಕಾರ ಬರುತ್ತೆ’ ಎಂದೂ ರಾಹುಲ್ ಗಾಂಧಿ ಹೇಳಿದ್ದರು. ಅಲ್ಲಿ ಬಿಜೆಪಿ ಸರ್ಕಾರ ಬಂತು. ಇದರರ್ಥ ಅವರು ತಮ್ಮ ರಾಜಕೀಯ ತಿಳುವಳಿಕೆಯನ್ನು ಕಳೆದುಕೊಂಡಿದ್ದಾರೆ ಎಂದಲ್ಲ. ಮುನ್ಸೂಚನೆಗಳು ತಪ್ಪಾಗಬಹುದು ಎಂದು ಹೇಳಿದರು.

400 ಪಾರ್ ಘೋಷಣೆ ದುರಹಂಕಾರದ ಸಂಕೇತವೆಂದು ಜನರು ಪರಿಗಣಿಸಿದ್ದರು !

ಪ್ರಶಾಂತ ಕಿಶೋರ್ ತಮ್ಮ ಮಾತು ಮುಂದುವರೆಸಿ, 400ಕ್ಕೂ ಹೆಚ್ಚು ಸ್ಥಾನಗಳ ಘೋಷಣೆ ನೀಡಿದ್ದರಿಂದ ಬಿಜೆಪಿಗೆ ಹೆಚ್ಚು ಪೆಟ್ಟು ಬಿದ್ದಿತು. ಇಂತಹ ಘೋಷಣೆ ದುರಹಂಕಾರದ ಸಂಕೇತವೆಂದು ಜನರು ಭಾವಿಸಿದರು. ವಿರೋಧಿ ಪಕ್ಷಗಳು, ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಪಡೆದರೆ ದೇಶದ ಸಂವಿಧಾನವನ್ನೇ ಬದಲಿಸಲಿದೆ ಎಂದು ವಿರೋಧ ಪಕ್ಷವೂ ಪ್ರಚಾರ ಮಾಡಿತ್ತು. 400ಕ್ಕೂ ಹೆಚ್ಚು ಸೀಟುಗಳು, ಘೋಷಣೆ ಚೆನ್ನಾಗಿದೆ; ಆದರೆ ಇದು ಭಾಗಶಃ. 400ಕ್ಕೂ ಹೆಚ್ಚು ಸೀಟುಗಳು ದೊರೆಯಲಿವೆ ಎಂಬ ಘೋಷಣೆಯೊಂದಿಗೆ ಕೈಬಿಡಲಾಯಿತು. 2014 ರಲ್ಲಿ, ಬಿಜೆಪಿಯ ಘೋಷಣೆ, ‘ಬಹುತ್ ಹೋ ಗಯಿ ಮಹಂಗಾಯಿ ಕಿ ಮಾರ್, ಅಬ್ ಕಿ ಬಾರ್ ಮೋದಿ ಸರ್ಕಾರ್ !’ 400 ಕ್ಕೂ ಹೆಚ್ಚು ಸ್ಥಾನ ಸಿಗಲಿದೆ, ಈ ಘೋಷಣೆಯ ಹಿಂದೆ ಮುಂದೆ ಈ ರೀತಿಯಲ್ಲಿ ಏನೂ ಇರಲಿಲ್ಲ, ಅದು ಮತದಾರರಿಗೆ ಇಷ್ಟವಾಗಲಿಲ್ಲ.