ಬೆಂಗಳೂರು (ಕರ್ನಾಟಕ) – ಮುಸಲ್ಮಾನ ಮಹಿಳೆಯರ ಸಂಕಷ್ಟವನ್ನು ತೋರಿಸುವ ‘ಹಮಾರೆ ಬಾರಾ’ ಚಲನಚಿತ್ರವನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ವಿವಿಧ ಮುಸ್ಲಿಂ ಸಂಘಟನೆಗಳಿಂದ ದೂರು ಬಂದ ನಂತರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕರ್ನಾಟಕ ಸರ್ಕಾರದ ಈ ನಿರ್ಧಾರಕ್ಕೂ ಮುನ್ನ ಮುಂಬಯಿ ಉಚ್ಚ ನ್ಯಾಯಾಲಯವು ‘ಹಮಾರೆ ಬಾರಾ’ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಿತ್ತು; ಆದರೆ ನಂತರ ಈ ನಿಷೇಧವನ್ನು ಹಿಂಪಡೆಯಿತು.
ಎ.ಎನ್.ಐ. ಸುದ್ದಿ ಸಂಸ್ಥೆಯ ಪ್ರಕಾರ, ಕರ್ನಾಟಕ ಚಲನಚಿತ್ರ (ನಿಯಂತ್ರಣ) ಕಾಯಿದೆ, 1964 ರ ಕಲಂ ಅನುಸಾರ, ಸರ್ಕಾರವು ‘ಹಮಾರೆ ಬಾರಾ’ ಚಲನಚಿತ್ರದ ಪ್ರಸಾರ ಅಥವಾ ಪ್ರದರ್ಶನವನ್ನು 2 ವಾರಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ನಿಷೇಧಿಸಿದೆ. ರಾಜ್ಯದಲ್ಲಿ ಚಲನ ಚಿತ್ರ ಬಿಡುಗಡೆಗೆ ಅವಕಾಶ ನೀಡಿದರೆ ಕೋಮುಗಲಭೆ ನಿರ್ಮಾಣ ಆಗಬಹುದು ಎಂದು ಸರ್ಕಾರ ಹೇಳಿದೆ. ಚಿತ್ರದ ಟ್ರೇಲರ್ ವೀಕ್ಷಿಸಿದ ನಂತರ ಹಲವಾರು ಅಲ್ಪಸಂಖ್ಯಾತ ಸಂಘಟನೆಗಳು ಮತ್ತು ನಿಯೋಗಗಳ ಮನವಿಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
Congress government in Karnataka bans the movie ‘Hamare Baarah’ – Claims Decision Taken To Prevent ‘Communal Tension’
What else can one expect in the State ruled by Mu$l!m-loving Congress government ?
Has the Congress ever banned films that hurt the religious sentiments of… pic.twitter.com/OTbb5K0AiP
— Sanatan Prabhat (@SanatanPrabhat) June 7, 2024