‘Hamaare Barah’ Release Approved : ‘ಹಮಾರೆ ಬಾರಹ್’ ಚಲನಚಿತ್ರ ಪ್ರಸಾರಕ್ಕೆ ಮುಂಬಯಿ ಹೈಕೋರ್ಟ್ ನ ವಿಭಾಗೀಯ ಪೀಠದಿಂದ ಅನುಮತಿ !

ಚಲನಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆಯಲಾಗುವುದು ಎಂದು ಚಲನಚಿತ್ರ ನಿರ್ಮಾಪಕರಿಂದ ಭರವಸೆ

ಮುಂಬಯಿ – ‘ಹಮಾರೆ ಬಾರಹ್’ ಚಲನಚಿತ್ರದ ಪ್ರಸಾರಕ್ಕೆ ಮುಂಬಯಿ ಹೈಕೋರ್ಟ್ ನ ವಿಭಾಗೀಯ ಪೀಠ ಅನುಮತಿ ನೀಡಿದೆ. ಚಲನಚಿತ್ರದಿಂದ ಎಲ್ಲಾ ಆಕ್ಷೇಪಾರ್ಹ ಸಂಭಾಷಣೆಗಳನ್ನು ಅಳಿಸುವುದಾಗಿ ಚಲನಚಿತ್ರ ನಿರ್ಮಾಪಕ ನ್ಯಾಯಾಲಯಕ್ಕೆ ಭರವಸೆ ನೀಡಿದರು. ನಂತರ ನ್ಯಾಯಾಲಯವು ಮೇಲಿನ ಆದೇಶವನ್ನು ನೀಡಿತು. ನ್ಯಾಯಮೂರ್ತಿ ಕಮಲ್ ಖಾತಾ ಮತ್ತು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರ ರಜಾಕಾಲದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

1. ‘ಹಮಾರೆ ಬಾರಾಹ್’ ಚಲನಚಿತ್ರದಲ್ಲಿ ಮುಸ್ಲಿಂ ಸಮುದಾಯವನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಚಲನ ಚಿತ್ರದ ಟ್ರೇಲರ್‌ನಲ್ಲಿನ ಸಂಭಾಷಣೆಗಳು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತಿವೆ. ಆದ್ದರಿಂದ ಚಲನ ಚಿತ್ರ ಪ್ರದರ್ಶನವನ್ನು ನಿಷೇಧಿಸಬೇಕು’, ಎಂದು ಪುಣೆಯ ಅಜರ್ ತಾಂಬೋಲಿ ಅರ್ಜಿ ಸಲ್ಲಿಸಿದ್ದರು. (ಮುಸ್ಲಿಂ ಸಮಾಜದ ನಿಜಸ್ವರೂಪವನ್ನು ತೆರೆದಿಡುವ ಚಲನಚಿತ್ರವನ್ನು ನಿಷೇಧಿಸಲು ಮುಸ್ಲಿಮರು ಪ್ರಯತ್ನಿಸುತ್ತಿದ್ದಾರೆ ! – ಸಂಪಾದಕರು)

2. ಜೂನ್ 6 ರಂದು ವಿಭಾಗೀಯ ಪೀಠದ ಮುಂದೆ ನಡೆದ ವಿಚಾರಣೆಯಲ್ಲಿ ‘ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿಯ 3 ಸದಸ್ಯರ ಸಮಿತಿಯು ಚಲನ ಚಿತ್ರ ವೀಕ್ಷಿಸಿ ವರದಿ ನೀಡಬೇಕು’, ಎಂದು ಆದೇಶಿಸಿತ್ತು. ಆ ಸಮಿತಿಯಲ್ಲಿ ನಾಗರಾಜ ರೇವಣಕರ್, ಇಶ್ರತ್ ಸೈಯದ್, ನೀಲಾಂಬರಿ ಸಾಲ್ವಿ ಇದ್ದರು. ಅದರಂತೆ, ಸಮಿತಿಯ ಸದಸ್ಯರು ವಿವರಣೆಯನ್ನು ನೋಡಿದ ನಂತರ ಮಧ್ಯಂತರ ವೀಕ್ಷಣೆ ಮಾಡಿದರು. ಅಂತಿಮ ವರದಿಯನ್ನು ಸಲ್ಲಿಸಲು ಜೂನ್ 12 ರವರೆಗೆ ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ಒತ್ತಾಯಿಸಿದೆ; ಆದರೆ ‘ಆ ವರದಿಗಾಗಿ ಸಿನಿಮಾ ನಿಲ್ಲಿಸಲು ಸಾಧ್ಯವಿಲ್ಲ’ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

3. ಆದರೆ, ರಾಜ್ಯದಲ್ಲಿ ಧಾರ್ಮಿಕ ಉದ್ವಿಗ್ನತೆಯ ಕಾರಣವೊಡ್ಡಿ ಚಿತ್ರದ ಪ್ರದರ್ಶನವನ್ನು ನಿಷೇಧಿಸಲಾಗಿದೆ.