PM Modi’s Election Campaign: ಮಹಾರಾಷ್ಟ್ರದಲ್ಲಿ ಪ್ರಧಾನಿ ಸಭೆ ನಡೆಸಿದರೂ ಅಭ್ಯರ್ಥಿಗಳ ಸೋಲು !

ಮುಂಬಯಿ – ಪ್ರಧಾನಿ ನರೇಂದ್ರ ಮೋದಿ ಈ ವರ್ಷ ಮಹಾರಾಷ್ಟ್ರದಲ್ಲಿ ಚುನಾವಣೆಯ 18 ಸಭೆಗಳನ್ನು ನಡೆಸಿದರು; ಆದರೂ ಕೂಡ ಆಡಳಿತ ಮಹಾಮೈತ್ರಿಕೂಟದ ಹಲವು ಅಭ್ಯರ್ಥಿಗಳು ಸೋತಿದ್ದಾರೆ. ಕೇವಲ 5 ಜನರು ಗೆದ್ದಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷಗಳ ಮಹಾವಿಕಾಸ್ ಮೈತ್ರಿಕೂಟ ಕೂಡ ಪ್ರಬಲವಾಗಿತ್ತು; ಆದರೆ ಮೋದಿಯವರ ಸಭೆಗಳಿಂದಾಗಿ ವಾತಾವರಣವೇ ಬದಲಾಗುವ ಸಾಧ್ಯತೆ ಇದೆಯೆಂದು ಮೈತ್ರಿಕೂಟಕ್ಕೆ ಅನ್ನಿಸುತ್ತಿತ್ತು. ವಾಸ್ತವದಲ್ಲಿ ಬೇರೆಯೇ ಘಟಿಸಿದೆ. ಮುಂಬಯಿನಲ್ಲಿ ಮೈತ್ರಿಕೂಟದ 6 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ, ಹೀಗೆ ಪಕ್ಷದ ನಾಯಕತ್ವಕ್ಕೆ ದೃಢವಾದ ನಂಬಿಕೆಯನ್ನು ಇತ್ತು; ಆದರೆ ತಿಕ್ಕಾಟದ ಹೋರಾಟದ ನಂತರವೂ ಮಹಾಮೈತ್ರಿಯ ಸೋಲಾಯಿತು.