Modi’s 100 Day Review Agenda : 100 ದಿನಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ !

ನವ ದೆಹಲಿ – ಚುನಾವಣೋತ್ತರ ಪರೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಬಹುಮತ ಪಡೆಯುವ ಸ್ಪಷ್ಟ ಸೂಚನೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಏನು ಮಾಡಬೇಕೆಂದು ಪಟ್ಟಿ ಮಾಡಿದ್ದಾರೆ. ಮೂಲಗಳ ಪ್ರಕಾರ ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಪ್ರಧಾನಿ ಮೋದಿ ಈಗಾಗಲೇ ಅಧಿಕಾರಿಗಳಿಗೆ ಕಲ್ಪನೆ ನೀಡಿದ್ದಾರೆ. ಆಗಸ್ಟ್ 2024 ರ ವೇಳೆಗೆ ಸರ್ಕಾರವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ನಂಬಲಾಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.

1. ಹೊಸ ಸರ್ಕಾರ ರಚನೆಯಾದ ನಂತರ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಅವರನ್ನು ಮೊದಲು ನೇಮಿಸಬಹುದು. ಒಂದು ತಿಂಗಳೊಳಗೆ ಹೊಸ ಸೇನಾ ಮುಖ್ಯಸ್ಥ ಮತ್ತು ಗುಪ್ತಚರ ನಿರ್ದೇಶಕರನ್ನು ನೇಮಿಸಬಹುದು.

2. ಸೇನೆಯನ್ನು ಸ್ವಾವಲಂಬಿಯಾಗಿಸುವುದು ಮೋದಿ ಸರ್ಕಾರದ ಮುಂದಿನ ಗುರಿಯಾಗಿದೆ. ಆ ನಿಟ್ಟಿನಲ್ಲಿ ಸೇನೆಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

3. ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳ ಮೇಲೆಯೂ ಕೆಲಸ ಮುಂದುವರಿಯಲಿದೆ.