|
ಕೋಟಾ (ರಾಜಸ್ಥಾನ) – ಕೆಲವು ದಿನಗಳ ಹಿಂದೆ ದೇವನಾರಾಯಣ ದೇವಸ್ಥಾನಕ್ಕೆ ಹೋಗುತ್ತಿದ್ದ 65 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇದು ಅನಾರೋಗ್ಯದಿಂದ ಆಗಿದೆ ಎಂದು ಹೇಳಲಾಗಿತ್ತು; ಆದರೆ ಇದೀಗ ದೇವಸ್ಥಾನದ ಬಳಿಯಿದ್ದ ಸಿಸಿಟಿವಿ ದೃಶ್ಯಾವಳಿಯಿಂದ ಥಳಿತದಿಂದಲೇ ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ. ತದನಂತರ ಪೊಲೀಸರು ಫೈಜಾನ, ಜೀಶಾನ್ ಮತ್ತು ಫಿರೋಜ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂವರು ಕ್ಷುಲ್ಲಕ ಕಾರಣಕ್ಕೆ ಸತ್ಯನಾರಾಯಣ ಗುರ್ಜರ್ ಅವರನ್ನು ಥಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾರೆ. ಗುರ್ಜರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದರು. ಅವರ ಪುತ್ರ ಯುಧಿಷ್ಠಿರ ಖತಾನಾ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಪ್ರದೇಶದ ಜಿಲ್ಲಾಧ್ಯಕ್ಷರಾಗಿದ್ದಾರೆ.
ಮೇ 22 ರಂದು ಸತ್ಯನಾರಾಯಣ ಗುರ್ಜರ್ ಅವರು ದೇವನಾರಾಯಣನ ದರ್ಶನಕ್ಕಾಗಿ ತೆರಳಿದ್ದರು. ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಅಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳಿದ್ದ ಕಾರಣ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆಗ ಅವರು ಅಲ್ಲಿರುವ ಜನರಿಗೆ ದೇವಸ್ಥಾನಕ್ಕೆ ಹೋಗಲು ದಾರಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಆದರೆ, ಆರೋಪಿಗಳು ದುರ್ವರ್ತನೆ ತೋರಿಸಿ ಗುರ್ಜರ ಅವರನ್ನು ಥಳಿಸಿದ್ದಾರೆ.
ಸಂಪಾದಕೀಯ ನಿಲುವುರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆ ನಡೆಯಬಾರದು ಎಂದೇ ಹಿಂದೂಗಳಿಗೆ ಅನಿಸುತ್ತಿದೆ ! ‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು’ ಎಂದು ಹೇಳುವ ಕಾಂಗ್ರೆಸ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷ ಮತ್ತು ಪ್ರಗತಿ(ಅಧೋ)ಪರರು ಈಗ ಏಕೆ ಬಾಯಿ ತೆರೆಯುತ್ತಿಲ್ಲ ? |