ವಿದ್ಯಾರ್ಥಿಯು ಆಸ್ಪತ್ರೆಗೆ ದಾಖಲು; ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿ
ಢಾಕಾ (ಬಾಂಗ್ಲಾದೇಶ ) – ವಂಗಬಂಧೂ ಶೇಖ ಮುಜೀಬೂರ ರಹಮಾನ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಪೀಠದಲ್ಲಿ ಕಲಿಯುತ್ತಿರುವ ಹಿಂದೂ ವಿದ್ಯಾರ್ಥಿಯಾದ ಉತ್ಸವ ಕುಮಾರ ಜ್ಞಾನನ ಮೇಲೆ ಮಹಮ್ಮದ ಪೈಗಂಬರರನ್ನು ಅವಮಾನಿಸಿರುವ ಬಗ್ಗೆ ಆರೋಪಿಸಿ, ಅವನನ್ನು ಕಾಲೇಜಿನ ಮುಸಲ್ಮಾನ ವಿದ್ಯಾರ್ಥಿಗಳು ಅಮಾನುಷವಾಗಿ ಥಳಿಸಿದ್ದಾರೆ. ಇದರಿಂದಾಗಿ ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವನ ಆರೋಗ್ಯವು ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಈ ಘಟನೆಯು ಮೇ ೨೬ ರಂದು ನಡೆದಿದೆ. ಉತ್ಸವನು ಸಾಮಾಜಿಕ ಜಾಲತಾಣದಲ್ಲಿ ಪೈಗಂಬರರನ್ನು ಅವಮಾನಿಸಿರುವ ಪೋಸ್ಟ್ ಪ್ರಸಾರ ಮಾಡಿದ್ದನು ಎಂದು ಆರೋಪಿಸಲಾಗಿದೆ. ಅವನಿಗೆ ಕಾಲೇಜಿನಿಂದ ಅಮಾನತುಗೊಳಿಸಲು ಒತ್ತಾಯಿಸಲಾಗಿದೆ. ಉತ್ಸವನಿಗೆ ಹೊಡೆದು ಅನಂತರ ಅವನಿಂದ ಅವಮಾನ ಮಾಡಿರುವ ಸಮ್ಮತಿಪತ್ರವನ್ನು ಬಲವಂತವಾಗಿ ಬರೆಸಿಕೊಳ್ಳಲಾಗಿದೆ. ಉತ್ಸವನು ಅದನ್ನು ಬರೆದು ಕೊಟ್ಟ ನಂತರ ಅವನಿಗೆ ಪುನಃ ಥಳಿಸಲಾಗಿದೆ. ಅನಂತರ ಅವನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸರು ಅವನನ್ನು ಇಲ್ಲಿಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆರೋಗ್ಯ ಸರಿಹೋದ ನಂತರ ಆತನ ವಿಚಾರಣೆ ನಡೆಸಲಾಗುವುದೆಂದು, ಪೊಲೀಸರು ಹೇಳಿದ್ದಾರೆ.
ಸಂಪಾದಕೀಯ ನಿಲುವುತಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವವರ ವಿರುದ್ಧ ಕಾನೂನು ಕೈಗೆತ್ತಿಕೊಳ್ಳುವವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಎಡಬಿಡದೆ ನೋವುಂಟು ಮಾಡುತ್ತಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ ! |