ಇಲ್ಲಿಯವರೆಗೆ 50 ಮಕ್ಕಳನ್ನು ಮಾರಾಟ, 11 ಶಿಶುಗಳ ಬಿಡುಗಡೆ.
ಭಾಗ್ಯನಗರ (ತೆಲಂಗಾಣ) – ಚಿಕ್ಕ ಮಕ್ಕಳ ಕಳ್ಳಸಾಗಣೆ ಮಾಡುವ ಒಂದು ತಂಡದ 3 ಜನರನ್ನು ಬಂಧಿಸಲಾಗಿದೆ. ಪೋಲೀಸರು ಈ ಗುಂಪಿನಿಂದ 11 ಶಿಶುಗಳನ್ನು ಬಿಡುಗಡೆಗೊಳಿಸಿದರು ಅಂತರರಾಜ್ಯ ಮಟ್ಟದಲ್ಲಿ ಮಕ್ಕಳ ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಚಿಕ್ಕ ಮಕ್ಕಳ ಕಳ್ಳಸಾಗಣೆ ಮಾಡುವ ಗುಂಪು ದೆಹಲಿ ಮತ್ತು ಪುಣೆ ಪ್ರದೇಶಗಳಲ್ಲಿ ಬಡ ಪೋಷಕರಿಂದ ಮಕ್ಕಳನ್ನು ಖರೀದಿಸಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುತ್ತಿತ್ತು. ಮಕ್ಕಳನ್ನು ಒಂದೂವರೆ ಲಕ್ಷದಿಂದ ಐದೂವರೆಲಕ್ಷದ ವರೆಗೆ ಮಾರುತ್ತಿದ್ದರು.
ಈ ಪ್ರಕರಣದ ಸಂದರ್ಭದಲ್ಲಿ ರಚಕೊಂಡದ ಪೊಲೀಸ್ ಆಯುಕ್ತರಾದ ಡಾ. ತರುಣ್ ಜೋಶಿಯವರು ಮಾತನಾಡಿ, ಮೇ 22 ರಂದು ಭಾಗ್ಯನಗರದ ಮೇಡಿಪಲ್ಲಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಂದ ಬಾಲಕಿಯ ‘ಮಾರಾಟ’ಕ್ಕೆ ಸಂಬಂಧಿಸಿದಂತೆ ದೂರು ಬಂದಿತ್ತು. ತದನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರು ಮಹಿಳೆಯರೊಂದಿಗೆ ಪುರುಷನನ್ನು ವಶಕ್ಕೆ ಪಡೆದರು. ಆ ಸಮಯದಲ್ಲಿ ಜನರು ಮಗುವನ್ನು ಮಾರಲು ಪ್ರಯತ್ನಿಸುತ್ತಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ನವದೆಹಲಿ ಮತ್ತು ಪುಣೆಯಿಂದ ತಂದಿದ್ದ ಮಕ್ಕಳನ್ನು ಮಾರಾಟ ಮಾಡುವ ದೊಡ್ಡ ಸಂಚು ನಡೆದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.