ಲವ್ ಜಿಹಾದಿಗಳಿಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರ ರಕ್ಷಣೆ ನೀಡುತ್ತಿದೆ !
ದುಮ್ಕಾ (ಜಾರ್ಖಂಡ) – ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವಾಗ ದೊಡ್ಡ ಪ್ರಮಾಣದಲ್ಲಿ ನಕ್ಸಲ ಹರಡಿತು. ಅನೇಕ ಯುವಕರ ಜೀವನ ಮತ್ತು ಅನೇಕ ಬುಡಕಟ್ಟು ಕುಟುಂಬಗಳು ನಾಶವಾಯಿತು. ಇಂದು ಜಾರ್ಖಂಡ್ ನಲ್ಲಿ ನುಸುಳುಕೋರರಿಂದ ತುಂಬಿದೆ. ಆದ್ದರಿಂದ, ಜಾರ್ಖಂಡ್‌ನಲ್ಲಿ ಆದಿವಾಸಿಗಳ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸಿದೆ. ಈ ನುಸುಳುಕೋರರಿಂದ ಬುಡಕಟ್ಟು ಮಹಿಳೆಯರ ಭದ್ರತೆ ಅಪಾಯಕ್ಕೆ ಸಿಲುಕಿದೆ. ಅನೇಕ ಹುಡುಗಿಯರ ಹತ್ಯೆಯಾಗಿದೆ, ಇನ್ನೂ ಕೆಲವರಿಗೆ ಜೀವಂತವಾಗಿ ಸುಡಲಾಯಿತು. ಈ ಜನರಿಗೆ ಜಾರ್ಖಂಡ್ ಸರಕಾರವು ರಕ್ಷಣೆ ನೀಡುತ್ತಿದೆ. ‘ಲವ್ ಜಿಹಾದ್’ದ ಪ್ರಾರಂಭವೂ ಜಾರ್ಖಂಡ್ ನಲ್ಲಿ ಆರಂಭವಾಗಿದೆ. ಜಾರ್ಖಂಡ್ ‘ಲವ್ ಜಿಹಾದ್’ ಎಂಬ ಪದವನ್ನು ಸೃಷ್ಟಿಸಿದೆ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಈ ಪಕ್ಷಗಳನ್ನು ಟೀಕಿಸಿದರು.
Jharkhand is the birth place of ‘Love J!h@d’. – PM Modi.
The Prime Minister further accused ‘Jharkhand Mukti Morcha’, of protecting love j!h@d!s.
👉 With PM Modi accepting the presence ‘Love J!h@d’ in the country, what do the oppositions have to say, who deny its existence.… pic.twitter.com/mll9ynpAHA
— Sanatan Prabhat (@SanatanPrabhat) May 28, 2024
ಪ್ರಧಾನಿ ಮೋದಿಯವರು ಮಾತು ಮುಂದುವರೆಸುತ್ತಾ, ಜಾರ್ಖಂಡ್‌ನಲ್ಲಿ ಕೆಲವು ರಾಜಕೀಯ ನಾಯಕರು ಭೂಮಿಯನ್ನು ವಶಪಡಿಸಿಕೊಳ್ಳಲು ತಮ್ಮ ತಾಯಿ ತಂದೆಯವರ ಹೆಸರುಗಳನ್ನು ಬದಲಾಯಿಸಿದರು. ಅವರು ಭಾರತೀಯ ಸೇನೆಯ ಸ್ಥಳವನ್ನು ಕೂಡ ಕಬಳಿಸಿದರು. ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕರು ಜನರ ಆಹಾರವನ್ನು ಕಸಿದುಕೊಂಡಿದ್ದಾರೆ. ಅವರು ‘ಹರ್ ಘರ್ ಜಲ್’ ಯೋಜನೆಯಲ್ಲಿಯೂ ಹಗರಣ ನಡೆಸಿದ್ದಾರೆ. ಇಂತಹ ಹಗರಣ ಮಾಡುವಾಗ ಅವರಿಗೆ ಯಾವುದೇ ನಾಚಿಕೆ ಆಗಲಿಲ್ಲ. ಜೂನ 4ರ ನಂತರ ಈ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಪಾದಕೀಯ ನಿಲುವುಪ್ರಧಾನಿ ನರೇಂದ್ರ ಮೋದಿಯವರೇ ಲವ್ ಜಿಹಾದ್ ಇರುವುದನ್ನು ಒಪ್ಪಿಕೊಂಡಿರುವುದರಿಂದ ‘ಲವ್ ಜಿಹಾದ್ ಅಸ್ತಿತ್ವದಲ್ಲಿಲ್ಲ’ ಎಂದು ಹೇಳುವವರಿಗೆ ಏನು ಹೇಳುವುದಿದೆ ? ಈಗ ಪ್ರಧಾನಿ ಮೋದಿಯವರೇ ಈ ರಾಷ್ಟ್ರೀಯ ಸಮಸ್ಯೆಯನ್ನು ಬಗೆಹರಿಸಿ ಹಿಂದೂಗಳನ್ನು ಭಯಮುಕ್ತರನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಹಿಂದೂಗಳು ಅಪೇಕ್ಷಿಸುತ್ತಾರೆ ! |