|
ಇಂದೋರ (ಮಧ್ಯಪ್ರದೇಶ) – ದೇಶದಲ್ಲಿನ ಎಲ್ಲಾಕ್ಕಿಂತ ಸ್ವಚ್ಛ ನಗರ ಎಂದು ಬಹುಮಾನ ಪಡೆದಿರುವ ಇಂದೊರದಲ್ಲಿ ನಿಷ್ಪಕ್ಷ ಪತ್ರಿಕೋದ್ಯಮ ನಡೆಸುವ ‘ಖಬರ್ ಹಲ್ಚಲ್’ ಈ ಜಾಲತಾಣದಿಂದ ದೇವಸ್ಥಾನದ ಸ್ವಚ್ಛತೆಯ ಅಭಿಯಾನ ಕೈಗೆತ್ತಿಕೊಂಡಿತ್ತು. ಈ ದೃಷ್ಟಿಯಿಂದ ‘ಸ್ವಚ್ಛ ಮಂದಿರ ಸಮೃದ್ಧ ಮಂದಿರ’ ಅಭಿಯಾನ ಆರಂಭವಾಗಿದೆ. ಇದರ ಅಡಿಯಲ್ಲಿ ದೇವಸ್ಥಾನದ ಸ್ವಚ್ಛತೆ ಕಾಪಾಡುವಂತೆ ಕರೆ ನೀಡುವ ಫಲಕಗಳು ದೇವಸ್ಥಾನದಲ್ಲಿ ಹಾಕಲಾಗಿದೆ ಹಾಗೂ ದೇವಸ್ಥಾನ ಸ್ವಚ್ಛಗೊಳಿಸಲಾಗುತ್ತಿದೆ. ಈ ಅಭಿಯಾನದ ನಗರದಲ್ಲಿ ಎಲ್ಲೆಡೆ ಶ್ಲಾಘನೆ ಮಾಡಲಾಗುತ್ತಿದೆ.
‘ಖಬಾರ್ ಹಲ್ಚಲ್’ ಸಂಪಾದಕ ಡಾ. ಅಪರ್ಣ ಜೈನ್ ‘ಅವಿಚಲ’ ಇವರು ಮಾತನಾಡಿ, ಭಕ್ತರು ಧೂಪ ಮತ್ತು ಊದಿನಕಡ್ಡಿ ಪಾಕೆಟ್ ಹಾಗೂ ಹೂವುಗಳು ದೇವಸ್ಥಾನದಲ್ಲಿ ಎಲ್ಲೆಂದರೆ ಅಲ್ಲಿ ಬಿಸಾಡುತ್ತಾರೆ. ಕುಂಕುಮದ ಬೆರಳುಗಳನ್ನು ಗೋಡೆಗಳಿಗೆ ವರೆಸಿ ಗೋಡೆಗಳನ್ನು ಹಾಳು ಮಾಡುತ್ತಾರೆ. ಆದ್ದರಿಂದ ದೇವರ ಮನೆ ಅಸ್ವಚ್ಛವಾಗುತ್ತದೆ, ಆದ್ದರಿಂದ ದೇವಸ್ಥಾನದ ಪಾವಿತ್ಯ್ರೆಯನ್ನು ಕಾಪಾಡುವುದಕ್ಕಾಗಿ ‘ಸ್ವಚ್ಛ ಮಂದಿರ ಸಮೃದ್ಧ ಮಂದಿರ’ ಅಭಿಯಾನ ಆರಂಭಿಸಲಾಗಿದೆ.
‘ನಾನು ನಿಮ್ಮ ಮನೆ ಅಸ್ವಚ್ಚಗೊಳಿಸುತ್ತಿಲ್ಲ ಹಾಗಾದರೆ ನೀವು ನನ್ನ ಮನೆ ಏಕೆ ಅಸ್ವಚ್ಛಗೊಳಿಸುತ್ತೀರಾ ?’, ಇಂತಹ ವಿಷಯದ ಪ್ರಬೋಧನಾತ್ಮಕ ಫಲಕಗಳು ನಾವು ತಯಾರಿಸಿದ್ದು ಆ ಫಲಕಗಳನ್ನು ನಗರದಲ್ಲಿನ ವಿವಿಧ ದೇವಸ್ಥಾನದಲ್ಲಿ ಹಾಕಿದ್ದೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|