British MP’s Take Retirement: ಬ್ರಿಟನ್: ಸಾರ್ವತ್ರಿಕ ಚುನಾವಣೆಗೂ ಮುನ್ನ ಆಡಳಿತ ಪಕ್ಷದ ೭೮ ಸಂಸದರು ರಾಜಕಾರಣದಿಂದ ನಿವೃತ್ತಿ !

ಒಟ್ಟು ೧೨೨ ನಾಯಕರು ಚುನಾವಣೆಗೆ ಸ್ಪರ್ಧಿಸಲು ನಿರಾಕರಣೆ !

ಲಂಡನ್ (ಇಂಗ್ಲೆಂಡ್) – ಬ್ರಿಟನ್ ನ ಸಾರ್ವತ್ರಿಕ ಚುನಾವಣೆಯ ಘೋಷಣೆಯ ನಂತರ ಪ್ರಧಾನಮಂತ್ರಿ ಋಷಿ ಸುನಾಕ್ ಅವರಿಗೆ ಒಂದು ಹೊಸ ಸಮಸ್ಯೆ ಎದುರಾಗಿದೆ. ಆಡಳಿತ ಪಕ್ಷವಾದ ಕನ್ಸರ್ವೇಟಿವ್(ಸಂಪ್ರದಾಯವಾದಿ)ನ ಸಾಂಸದರು ರಾಜೀನಾಮೆ ನೀಡಲು ಆರಂಭಿಸಿದ್ದಾರೆ. ಈ ಪಕ್ಷದ ಹಿರಿಯ ನಾಯಕ ಮೈಕಲ್ ಗೋವ್ಹ್ ಮತ್ತು ಅಂದ್ರೆ ಲಿಡಸನ್ ಅವರು ಕೂಡ ರಾಜೀನಾಮೆ ನೀಡಿದ್ದಾರೆ. ಇದರಿಂದ ಸುನಾಕ್ ಅವರ ಪಕ್ಷದಲ್ಲಿ ರಾಜಕಾರಣದಿಂದ ನಿವೃತ್ತವಾಗಿರುವ ಸಂಸದರ ಸಂಖ್ಯೆ ೭೮ ಕ್ಕೆ ತಲುಪಿದೆ. ರಾಜೀನಾಮೆ ನೀಡಿರುವ ಒಟ್ಟು ಬ್ರಿಟಿಷ್ ಸಂಸದರ ಸಂಖ್ಯೆ ೧೨೨ ಆಗಿದ್ದು ಜುಲೈ ೪ ರಂದು ಅಲ್ಲಿ ಚುನಾವಣೆ ನಡೆಯಲಿದೆ.

೨೦೧೦ ರ ಸಾರ್ವತ್ರಿಕ ಚುನಾವಣೆಯ ನಂತರ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಸಂಸದರು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿರುವುದು ಇದೇ ಮೊದಲ ಬಾರಿಯಾಗಿದೆ. ಬ್ರಿಟಿಷ್ ಸಂಸತ್ತಿನ ಕೆಳಮನೆಯ ಸಂಸತ್ತಿನಲ್ಲಿ ಒಟ್ಟು ೬೫೦ ಸಂಸದರಿದ್ದಾರೆ.

ಸಾರ್ವತ್ರಿಕ ಚುನಾವಣೆಯ ಮೊದಲು ರಾಜೀನಾಮೆ ನೀಡಲು ಹಿಂದಿನ ಕಾರಣ:

೧. ಎಲ್ಲಕ್ಕಿಂತ ಮಹತ್ವದ ಕಾರಣವೆಂದರೆ ಅಲ್ಲಿನ ಸಾಂಪ್ರದಾಯವಾದಿ ಪಕ್ಷದ ಸ್ಥಿತಿ ದಯನೀಯವಾಗಿದೆ. ಪಕ್ಷದ ಅನೇಕ ಸಾಂಸದರಿಗೆ ಮುಂದಿನ ಚುನಾವಣೆಯಲ್ಲಿ ತಾವು ಸೋಲುತ್ತೇವೆ ಎಂಬ ದೃಢ ನಂಬಿಕೆಯಿದೆ.

೨. ಅನೇಕ ಸಂಸದರ ವಯಸ್ಸು ಹೆಚ್ಚಿರುವುದು ಕೂಡ ಇದಕ್ಕೆ ಮಹತ್ವದ ಕಾರಣ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ಕೂಡ, ಕೆಲವು ಸಂಸದರ ವಯಸ್ಸು ೩೦ ವರ್ಷ ಕ್ಕಿಂತಲೂ ಕಡಿಮೆಯಿದೆ, ಆದರೂ ಕೂಡ ಅವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.

೩. ಕೆಲವು ಸಂಸದರು ರಾಜಕಾರಣದಿಂದ ನಿವೃತ್ತಿ ಪಡೆದು ಅನ್ಯ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದೆಂದು ನಿಶ್ಚಯಿಸಿದ್ದಾರೆ .

೪. ಮತ್ತೆ ಕೆಲವು ಸಂಸದರು ಈ ಒತ್ತಡದ ರಾಜಕಾರಣದಿಂದ ದೂರ ಉಳಿಯುವುದಕ್ಕಾಗಿ ಮುಂದಿನ ಚುನಾವಣೆಯನ್ನು ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.