ಇಂದು ಖ್ಯಾತ ಲೇಖಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್ ಸಮ್ಮಾನ್- 2024 ಪ್ರಶಸ್ತಿ ಪ್ರದಾನ

ಚಕ್ರವರ್ತಿ ಸೂಲಿಬೆಲೆ

ಹೊನ್ನಾವರ – ವೀರ ಸಾವರ್ಕರ್ ಪ್ರತಿಷ್ಠಾನದಿಂದ ಖ್ಯಾತ ಲೇಖಕ ಚಕ್ರವರ್ತಿ ಸೂಲಿಬೆಲೆ ಇವರಿಗೆ ವೀರ ಸಾವರ್ಕರ್ ಸಮ್ಮಾನ್- 2024 ಪ್ರಶಸ್ತಿ ನೀಡಲಾಗುವುದು. ಮೇ 28ರಂದು ಸಂಜೆ 5.30ಕ್ಕೆ ಮೈಸೂರು ಕಲಾಮಂದಿರದಲ್ಲಿ ‘ವೀರ ಸಾವರ್ಕರ್ ಸಮ್ಮಾನ್-2024′ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಪ್ರತಿಷ್ಠಾನದ ಸದಸ್ಯ ರಾಕೇಶ್ ಭಟ್ ಇವರು ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ಒಂದು ಲಕ್ಷ ನಗದು, ವೀರ ಸಾವರ್ಕರ್ ಅವರ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವುಳ್ಳ ಪ್ರತಿಷ್ಠಿತ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿಯ ಸ್ವರೂಪವಾಗಿದೆ.

ಚಕ್ರವರ್ತಿ ಸೂಲಿಬೆಲೆ ಇವರು ‘ಯುವಾ ಬ್ರಿಗೇಡ್’ ಸಂಘಟನೆಯ ಸಂಸ್ಥಾಪಕರಾಗಿದ್ದಾರೆ. ಈ ಸಂಸ್ಥೆಯು ಯುವಕರಿಗೆ ದೇಶಭಕ್ತಿಯನ್ನು ಕಲಿಸುತ್ತದೆ. ಈ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹಾಗೂ ಪತ್ರಕರ್ತ ಅಜಿತ ಹನುಮಕ್ಕನವರ ಇವರೂ ಸಹ ಉಪಸ್ಥಿತಿರಿರುವರು.