Naxalite Working In BBMP: ೭ ಪೊಲೀಸರ ಹತ್ಯೆ ಮಾಡಿದ್ದ ಮಾವೋವಾದಿ(ನಕ್ಸಲ್) ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಮಿಕ !

  • ೨೦೦೫ ರಲ್ಲಿ ನಡೆದಿದ್ದ ದಾಳಿ !

  • ಬಲೆ ಬೀಸಿ ನಕ್ಸಲನ ಬಂಧನ !

ಸೌಜನ್ಯ: ಸುವರ್ಣ ನ್ಯೂಸ್

ತುಮಕೂರು – ೨೦೦೫ ರಲ್ಲಿ ತುಮುಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಒಂದು ಭೀಕರ ಘಟನೆ ಘಟಿಸಿತ್ತು. ಅಲ್ಲಿಯ ವೆಂಕಟಮ್ಮನಹಳ್ಳಿಯಲ್ಲಿ ೩೦೦ ನಕ್ಸಲರು ಒಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ೭ ಪೊಲೀಸರನ್ನು ಹತ್ಯೆ ಮಾಡಿದ್ದರು. ಇದರಲ್ಲಿ ‘ಮೋಸ್ಟ್ ವಾಂಟೆಡ್’ ನಕ್ಸಲರಲ್ಲಿನ ಒಬ್ಬನಾಗಿರುವ ಕೊತ್ತಗೆರೆ ಶಂಕರ್ ಇವನು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಮಿಕನಾಗಿರುವನೆಂದು ತಿಳಿದ ನಂತರ ಪೊಲೀಸರು ಅವನನ್ನು ಬಂಧಿಸಿದರು. ಅವನು ಪಾಲಿಕೆಯ ಕಸದ ವಾಹನದ ಚಾಲಕನೆಂದು ಕೆಲಸ ಮಾಡುತ್ತಿದ್ದನು.

೨೦೦೫ ರಲ್ಲಿ ನಡೆದ ದಾಳಿಯಲ್ಲಿ ೭ ಜನ ಪೊಲೀಸರು ಸಾವನ್ನಪ್ಪಿದ್ದರು ಹಾಗೂ ೫ ಜನರು ಗಾಯಗೊಂಡಿದ್ದರು. ಆ ಸಮಯದಲ್ಲಿ ನಕ್ಸಲರು ಸರಕಾರಿ ಬಂದುಕುಗಳು ಮತ್ತು ಗುಂಡುಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ೩೨ ಜನರು ಆರೋಪ ಎದುರಿಸುತ್ತಿರುವವರನ್ನು ಪೊಲೀಸರು ಹುಡುಕುತ್ತಿದ್ದರು. ಶಂಕರನ ಮಾಹಿತಿ ದೊರೆಯುತ್ತಲೇ ತುಮಕೂರು ಜಿಲ್ಲೆಯ ಪೊಲೀಸ್ ಅಧಿಕಾರಿ ಕೆ.ವಿ. ಅಶೋಕ ಇವರ ನೇತೃತ್ವದಲ್ಲಿ ಬಲೆ ಬೀಸಿ ಅವನನ್ನು ಬಂಧಿಸಲಾಯಿತು.

ಸಂಪಾದಕೀಯ ನಿಲುವು

ಇಂತಹ ನಕ್ಸಲನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗದಿರುವುದು ಮತ್ತು ಅವನು ೧೯ ವರ್ಷಗಳ ಕಾಲ ಸಿಗದೇ ಇರುವುದು, ಇದು ಕರ್ನಾಟಕ ಪೊಲೀಸರಿಗೆ ಲಜ್ಜಾಸ್ಪದ ! ಕುಖ್ಯಾತ ನಕ್ಸಲನು ಇಷ್ಟು ವರ್ಷಗಳ ಕಾಲ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರತವಾಗಿದ್ದನು, ಈ ವಿಷಯ ಅದಕ್ಕಿಂತಲೂ ಗಂಭೀರವಾಗಿದೆ. ಇದರ ಹಿಂದೆ ಯಾವ ಸರಕಾರಿ ಅಧಿಕಾರಿಯ ಕೈವಾಡವಿತ್ತೆ ? ಇದರ ತನಿಖೆ ನಡೆಯಬೇಕು !