ಶಹಜಹಾಂಪುರ (ಉತ್ತರ ಪ್ರದೇಶ)ದಲ್ಲಿ ಬಸ್ ಮೇಲೆ ಕಲ್ಲು ತುಂಬಿದ ಡಂಪರ್ ಪಲ್ಟಿ; 11 ಜನರ ಸಾವು

ಶಹಜಹಾಂಪುರ (ಉತ್ತರ ಪ್ರದೇಶ) – ಇಲ್ಲಿ ನಡೆದ ಭೀಕರ ಅಪಘಾತದಲ್ಲಿ 11 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ. ಮೇ 25ರ ತಡರಾತ್ರಿ ಬಸ್ ಮೇಲೆ ಡಂಪರ್ ವಾಹನ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಈ ಬಸ್‌ನಲ್ಲಿ ಸುಮಾರು 70 ಭಕ್ತರು ಪ್ರಯಾಣಿಸುತ್ತಿದ್ದರು. ಬಸ್ ಸೀತಾಪುರದಿಂದ ಉತ್ತರಾಖಂಡದ ಪೂರ್ಣಗಿರಿಗೆ ಹೋಗುತ್ತಿತ್ತು. ಢಾಬಾದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದಾಗ ಈ ಅವಘಡ ಸಂಭವಿಸಿದೆ. ವೇಗವಾಗಿ ಬಂದ ಕಲ್ಲುಗಳನ್ನು ತುಂಬಿದ ಡಂಪರ್ ನೇರವಾಗಿ ಬಸ್‌ ಮೇಲೆ ಬಂದು ಪಲ್ಟಿಯಾಗಿದೆ. ಇದರಿಂದ ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕರು ಅಪಘಾತಕ್ಕೆ ಒಳಗಾದರು.