Muslims Attack On Karnataka Police : ದಾವಣಗೆರೆಯಲ್ಲಿ ಪೊಲೀಸ್ ಠಾಣೆಯಲ್ಲಿ ಕೈದಿ ಸಾವು; ಮುಸಲ್ಮಾನರಿಂದ ಪೊಲೀಸ ಠಾಣೆಯ ಮೇಲೆ ದಾಳಿ

  • ೧೧ ಪೊಲೀಸರಿಗೆ ಗಾಯ

  • ಪೊಲೀಸರ ವಾಹನಗಳ ಧ್ವಂಸ

ದಾವಣಗೆರೆ – ಇಲ್ಲಿಯ ಚೆನ್ನಗಿರಿ ಪೊಲೀಸ ಠಾಣೆಯ ಪೊಲೀಸರು ಜೂಜಿನ ಪ್ರಕರಣದಲ್ಲಿ ಆದಿಲ್ ಎಂಬ ಯುವಕನನ್ನು ಬಂಧಿಸಿದ್ದರು. ಬಂಧನದ ನಂತರ ಅವನ ಆರೋಗ್ಯ ಹದಗೆಟ್ಟಿರುವುದರಿಂದ ಅವನನ್ನು ಆಸ್ಪತ್ರೆಗೆ ಸಾಗಿಸಿದನಂತರ ಆತ ಮೃತಪಟ್ಟ. ಇದರಿಂದ ಆಕ್ರೋಶಗೊಂಡ ಮುಸಲ್ಮಾನರ ಗುಂಪು ಪೊಲೀಸ ಠಾಣೆಯ ಮೇಲೆ ದಾಳಿ ಮಾಡಿದೆ. ಇದರಲ್ಲಿ ೧೧ ಪೊಲೀಸರು ಗಾಯಗೊಂಡಿದ್ದಾರೆ. ದಾಳಿ ನಡೆಸಿರುವ ಮುಸಲ್ಮಾನರು ಮೊದಲು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಪೊಲೀಸ ಠಾಣೆಯ ಪರಿಸರದಲ್ಲಿ ನಿಂತಿರುವ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಆದಿಲನ ಮೃತ್ಯುವಿನ ಪ್ರಕರಣದಲ್ಲಿ ೨ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈಗ ಪೊಲೀಸ ಠಾಣೆಯ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನೇಮಕಗೊಳಿಸಲಾಗಿದೆ. ಪೊಲೀಸ ಠಾಣೆಯಲ್ಲಿನ ದಾಳಿಯ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ಚಿತ್ರೀಕರಣದ ಮೂಲಕ ಆರೋಪಿಗಳನ್ನು ಗುರುತಿಸಿ ಅವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ.

ಆದಿಲಗೆ ಪೊಲೀಸ ಕಠಡಿಯಲ್ಲಿ ಕಿರುಕುಳ ನೀಡಿರುವ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಪೊಲೀಸರು, ಪೊಲೀಸ ಠಾಣೆಯಲ್ಲಿ ತಂದ ನಂತರ ಕೇವಲ ೫-೬ ನಿಮಿಷದಲ್ಲಿಯೇ ಆದಿಲನ ಆರೋಗ್ಯ ಹಾಳಾಗಿತ್ತು. ಆದ್ದರಿಂದ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಡಾಕ್ಟರರು ಅವನನ್ನು ಮೃತ ಎಂದು ಹೇಳಿದರು ಎಂದು ದಾವೆ ಮಾಡಿದ್ದಾರೆ. ಪೊಲೀಸರು, ರಕ್ತದೊತ್ತಡ ಕಡಿಮೆ ಆಗಿದ್ದರಿಂದ ಆದಿಲ್ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆದಿಲನ ಶವದ ಮೇಲೆ ಯಾವುದೇ ರೀತಿಯ ಗಾಯಗಳು ಕಂಡು ಬಂದಿಲ್ಲ. ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಆದಿಲನ ಶವ ಪರೀಕ್ಷೆ ಮಾಡಲಾಗುವುದು.