Pope Francis Declared Dead Boy Saint : ೧೮ ವರ್ಷದ ಹಿಂದೆ ಸಾವನ್ನಪ್ಪಿದ್ದ ೧೫ ವರ್ಷದ ಹುಡುಗನನ್ನು ಸಂತನೆಂದು ಘೋಷಿಸಿದ ಪೋಪ್ ಫ್ರಾನ್ಸಿಸ್ !

೨ ಪವಾಡ ನಡೆಸಿದ್ದರಿಂದ ಸಂತ ಪದ !

ವ್ಯಾಟಿಕನ್ ಸಿಟಿ – ಲಂಡನ್ ದಲ್ಲಿ ಜನಿಸಿರುವ ಕಾರ್ಲೋ ಕ್ಯೂಟೀಸ್ ಎಂಬ ೧೫ ವರ್ಷದ ಹುಡುಗನನ್ನು ಮೃತ್ಯುವಿನ ನಂತರ ಸಂತನೆಂದು ಘೋಷಿಸಲಾಗಿದೆ. ವ್ಯಾಟಿಕನ್ ನ ಸಂತ ಪದವಿ ವಿಭಾಗದ ಪ್ರಮುಖ ಕಾರ್ಡಿನಲ್ ಮಾರ್ಸೆಲೋ ಸಮೇರಾರು ಅವರ ಜೊತೆಗೆ ನಡೆದ ಸಭೆಯಲ್ಲಿ ಕ್ರೈಸ್ತರ ಸರ್ವೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಕಾರ್ಲೋ ಗೆ ಸಂತ ಪದವಿ ನೀಡುವ ನಿರ್ಣಯ ತೆಗೆದುಕೊಂಡರು. ಪೋಪ್ ಅವರ ವತಿಯಿಂದ ಪ್ರಸಿದ್ಧಿಗೊಳಿಸಿರುವ ಸುತ್ತೋಲೆಯಲ್ಲಿ ಈ ಮಾಹಿತಿ ನೀಡಲಾಗಿದೆ.

ಕಾರ್ಲೋ ಎಂಬ ಹುಡುಗನು ಎರಡು ಪವಾಡಗಳನ್ನು ಮಾಡಿರುವುದಾಗಿ ಕೂಡ ಮಾನ್ಯ ಮಾಡಿರುವುದರಿಂದ ಅವನು ಸಂತ ಪದವಿಗೆ ಅರ್ಹನು ಎಂದು ಹೇಳಲಾಗಿದೆ. ಕೇವಲ ದೇವರೇ ಪವಾಡ ಮಾಡುತ್ತಾನೆ ಎಂದು ರೋಮನ್ ಕಥೋಲಿಕ್ ಚರ್ಚ್ ಬೋಧಿಸುತ್ತದೆ; ಆದರೆ ಸ್ವರ್ಗದಲ್ಲಿ ದೇವರ ಜೊತೆಗೆ ಯಾವ ಸಂತರು ಇರುತ್ತಾರೋ ಹಾಗೂ ಜನರ ಪರವಾಗಿ ಯಾರು ದೇವರಿಗೆ ಪ್ರಾರ್ಥನೆ ಮಾಡುತ್ತಾರೋ, ಅವರು ಪವಾಡ ಮಾಡಬಹುದು ಎಂಬ ನಂಬಿಕೆ ಈ ಪಂಥದಲ್ಲಿದೆ.

ಯಾರು ಈ ಕಾರ್ಲೋ ?

ಕಾರ್ಲೋ ಎಂಬವನು ೩ ಮೇ ೧೯೯೧ ರಂದು ಲಂಡನ್ ನಲ್ಲಿ ಜನಿಸಿದ್ದನು. ನಂತರ ಅವನು ಇಟಲಿಯ ಮಿಲನದಲ್ಲಿ ವಾಸಿಸುತ್ತಿದ್ದನು. ೨೦೦೬ ರಲ್ಲಿ ಅವನು ೧೫ ವರ್ಷದವನಾಗಿದ್ದಾಗ ಬ್ಲಡ್ ಕ್ಯಾನ್ಸರ್ ನಿಂದ ಅವನ ನಿಧನವಾಯಿತು. ಕಾರ್ಲೋ ಕಂಪ್ಯೂಟರ್ ತಜ್ಞನಾಗಿದ್ದನು. ಆನ್ಲೈನ್ ಪದ್ಧತಿಯಿಂದ ಕ್ಯಾಥೋಲಿಕ್ ಪಂಥದ ಪ್ರಸಾರ ಮಾಡುವುದಕ್ಕಾಗಿ ಅವನು ಅನೇಕ ಜಾಲತಾಣಗಳನ್ನು ನಿರ್ಮಿಸಿದ್ದನು. ವ್ಯಾಟಿಕನ್ ಜೊತೆಗೆ ಸಂಬಂಧಿತ ಸಂಸ್ಥೆಗಾಗಿ ಅವನು ಕೆಲಸ ಮಾಡಿದ್ದನು. ‘ಗಾಡ್ಸ್ ಇನ್ಫ್ಲ್ಯೂಎನ್ಸರ್ ‘ ಮತ್ತು ‘ಇಂಟರ್ನೆಟ್ ಸಂತ’ ಎಂದು ಅವನನ್ನು ಕರೆಯಲಾಗುತ್ತಿತ್ತು. ಕಾರ್ಲೋ ಕ್ಯಾಥೋಲಿಕ್ ಚರ್ಚಿನ ಮೊದಲ ‘ಮೀಲೆನಿಯಲ್ ಸಂತ’ನಾಗಿದ್ದಾನೆ. ೧೯೮೦ ರಿಂದ ೧೯೯೦ ಈ ದಶಕದಲ್ಲಿ ಜನಿಸಿದ ಹುಡುಗರನ್ನು ‘ಮೀಲೆನಿಯಲ್ ಜನರೇಶನ್’ ಎಂದು ಕರೆಯುತ್ತಾರೆ.

ಕಾರ್ಲೋ ಪವಾಡದ ದಾವೆ !

ಮೊದಲ ಪವಾಡ: ಮ್ಯಾಥುಸ್ ಎಂಬ ಬ್ರೆಜಿಲಿನ ಹುಡುಗನಿಗೆ ಜನನದಿಂದಲೇ ಗಂಭೀರ ರೋಗಗಳಿದ್ದವು. ಆ ರೋಗಗಳನ್ನು ಕಾರ್ಲೋ ವಾಸಿ ಮಾಡಿದ್ದನು. ಈ ಪವಾಡವು ೨೦೧೪ ರಲ್ಲಿ ನಡೆದಿದೆ. ಮ್ಯಾಥುಸ್ ಕುಟುಂಬದ ಜೊತೆಗೆ ಸಂಪರ್ಕದಲ್ಲಿದ್ದ ಓರ್ವ ಪಾದ್ರಿಯು ಮ್ಯಾಥುಸ್ ನಿಗೆ ಕಾರ್ಲೋನ ಅಸ್ಥಿಯನ್ನು ಸ್ಪರ್ಶ ಮಾಡಲು ಹೇಳಿದರು, ಹಾಗೆ ಮಾಡಿದ ನಂತರ ಮ್ಯಾಥುಸ್ ಸಂಪೂರ್ಣವಾಗಿ ಗುಣಮುಖವಾದನು.

ಎರಡನೆಯ ಪವಾಡ: ಕೋಸ್ಟಾರಿಕಾ ದೇಶದಲ್ಲಿನ ಓರ್ವ ಹುಡುಗಿಯು ಇಟಲಿಯಲ್ಲಿ ಅಧ್ಯಯನ ಮಾಡುತ್ತಿದ್ದಳು. ಆಕೆಯ ತಲೆಗೆ ಆಗಿರುವ ತೀವ್ರ ಗಾಯದಿಂದ ಗುಣಮುಖವಾಗಿರುವ ಮಾಹಿತಿ ಇದೆ. ಇಟಲಿಯನ್ ಬಿಷಪ್ಸ್ ಕಾನ್ಫರೆನ್ಸ್ ಎಂಬ ಪತ್ರಿಕೆಯ ಪ್ರಕಾರ, ಹುಡುಗಿಯ ತಾಯಿಯು ಕಾರ್ಲೋ ನ ಮೃತ ದೇಹದ ಎದುರು ಪ್ರಾರ್ಥನೆ ಮಾಡಿದ್ದಳು ಮತ್ತು ಒಂದು ಚೀಟಿಯನ್ನು ಇಟ್ಟಿದ್ದಳು .