ಮಾನನಷ್ಟ ಪ್ರಕರಣ; ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ

  • ೨ ವರ್ಷದ ಜೈಲು ಶಿಕ್ಷೆಯಾಗುವ ಸಾಧ್ಯತೆ

  • ೨೪ ವರ್ಷಗಳ ಹಿಂದೆ ಪ್ರಸ್ತುತ ದೆಹಲಿಯ ರಾಜ್ಯಪಾಲ ವಿ.ಕೆ.ಸಕ್ಸೆನಾ ಅವರ ಅವಮಾನ

ನವದೆಹಲಿ – ಸಾಕೇತ್ ನ್ಯಾಯಾಲಯವು ನರ್ಮದಾ ಬಚಾವ್ ಆಂದೋಲನದ ಸಂಸ್ಥಾಪಕಿ ಮೇಧಾ ಪಾಟ್ಕರ್ ಅವರು ೨೪ ವರ್ಷಗಳ ಹಿಂದೆ ಒಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ದೆಹಲಿಯ ಅಂದಿನ ರಾಜ್ಯಪಾಲರಾಗಿದ್ದ ವಿ.ಕೆ.ಸಕ್ಸೇನ ಅವರು ಮೇಧಾ ಪಾಟ್ಕರ್ ಅವರ ವಿರುದ್ಧ ಅರ್ಜಿ ದಾಖಲಿಸಿದ್ದರು.

ಸಕ್ಸೆನಾ ಅವರು ಕರ್ಣಾವತಿಯ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟಿಸ್ ಈ ಸ್ವಯಂ ಸೇವಿ ಸಂಸ್ಥೆಯ ಅಧ್ಯಕ್ಷರಾಗಿರುವಾಗ ಅವರು ಮೇಧಾ ಪಾಟ್ಕರ್ ಮತ್ತು ನರ್ಮದಾ ಬಚಾವ್ ಆಂದೋಲನದ ವಿರುದ್ಧ ಒಂದು ಜಾಹೀರಾತನ್ನು ಪ್ರಕಟಿಸಿದ್ದರು. ಸಕ್ಸೆನಾ ಅವರ ಸಂಸ್ಥೆಯು ಸರದಾರ ಸರೋವರ ಯೋಜನೆಯ ಪರವಾಗಿತ್ತು. ಈ ಜಾಹೀರಾತಿನ ನಂತರ ಮೇಧಾ ಪಾಟ್ಕರ್ ಅವರು ಸಕ್ಸೆನಾ ಅವರ ವಿರುದ್ಧ ಮೊಕದ್ದಮೆ ಹೂಡಿದ್ದರು ಹಾಗೂ ಸಕ್ಸೆನಾ ಅವರು ತಿರುಗಿ ಮೇಧಾ ಪಾಟ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ತೀರ್ಪು ನೀಡುವಾಗ ನ್ಯಾಯಾಲಯವು ಮೇಧಾ ಪಾಟ್ಕರ್ ಅವರನ್ನು ತಪ್ಪಿತಸ್ಥರೆಂದು ಹೇಳಿದೆ. ಅವರಿಗೆ ೨ ವರ್ಷದ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಮೇಧಾ ಪಾಟ್ಕರ್ ಅವರ ಪ್ರತಿಕ್ರಿಯೆ ಇಲ್ಲಿಯವರೆಗೆ ಬಂದಿಲ್ಲ.

ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದ್ದೇನು ?

೧. ಮೇಧಾ ಪಾಟ್ಕರ್ ಅವರು ಭಾರತೀಯ ದಂಡ ಸಂಹಿತೆಯ ಕಲಂ ೫೦೦ ರ ಪ್ರಕಾರ ದಂಡನೀಯ ಅಪರಾಧ ಮಾಡಿದ್ದಾರೆ. ಹಾಗಾಗಿ ಅವರು ತಪ್ಪಿತಸ್ಥರಾಗಿದ್ದಾರೆ. ಅವರು ಗೊತ್ತಿದ್ದೂ ಅರ್ಜಿದಾರರನ್ನು ಕಳಂಕಿತಗೋಳಿಸಿದ್ದಾರೆ.

೨. ಮೇಧಾ ಪಾಟ್ಕರ್ ಅವರು ಕೇವಲ ಅರ್ಜಿದಾರರನ್ನು ಕಳಂಕಿತಗೊಳಿಸುವುದಕ್ಕಾಗಿಯೇ ಎಲ್ಲಾ ಆರೋಪಗಳನ್ನು ಮಾಡಿದರು.

೩. ಮೇಧಾ ಪಾಟ್ಕರ್ ಅವರ ಕೃತಿಯಿಂದ ಸಕ್ಸೆನಾ ಇವರ ಪ್ರತಿಷ್ಠೆ ಮತ್ತು ಅವರ ವಿಶ್ವಾಸಾರ್ಹತೆಗೆ ನಿಜವಾಗಿಯೂ ದೊಡ್ಡ ಧಕ್ಕೆ ಉಂಟಾಗಿದೆ.