Death Threats To ‘Hamare Barah’ : ‘ಹಮಾರೇ ಬಾರಹ’ ಚಲನಚಿತ್ರದ ಕಲಾವಿದರಿಗೆ ಜೀವ ಬೆದರಿಕೆ ಮತ್ತು ಬಲಾತ್ಕಾರದ ಬೆದರಿಕೆ !

ಚಲನಚಿತ್ರದಲ್ಲಿ ಮುಸಲ್ಮಾನರ ಪರಂಪರೆಯ ಕುರಿತು ವಿವರಣೆ !

ಮುಂಬಯಿ – ಹಿಂದಿ ಚಲನಚಿತ್ರ ಹಮಾರೇ ಬಾರಹ ‘ ದ ನಿರ್ಮಾಪಕ ಮತ್ತು ಕಲಾವಿದರನ್ನು ಕೊಲ್ಲುವ ಹಾಗೂ ಬಲಾತ್ಕಾರ ಮಾಡುವ ಬೆದರಿಕೆ ದೊರೆತಿದ್ದು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಚಲನಚಿತ್ರದಲ್ಲಿ ಇಸ್ಲಾಮ್ ಪದ್ಧತಿಗಳು ಮತ್ತು ಪರಂಪರೆಯ ಬಗ್ಗೆ ವಿವರಣೆ ನೀಡಲಾಗಿದೆ ಹಾಗಾಗಿ ಈ ಬೆದರಿಕೆಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಈ ಚಲನಚಿತ್ರದ ಮೂಲಕ ಇಸ್ಲಾಂ ಧರ್ಮದ ಯಾವ ವ್ಯಾಖ್ಯೆ ಯೋಗ್ಯವಾಗಿದೆ ? ಎಂದು ಪ್ರಶ್ನಿಸಲಾಗಿದೆ. ಈ ಚಲನಚಿತ್ರವನ್ನು ಕಮಲ ಚಂದ್ರ ಅವರು ನಿರ್ದೇಶಿಸಿದ್ದು ಹಿರಿಯ ನಟ ಅನ್ನು ಕಪೂರ್ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಿರ್ಮಾಪಕರು, ಕೇವಲ ನಮಗಷ್ಟೇ ಅಲ್ಲ, ನಮ್ಮ ಕುಟುಂಬದಲ್ಲಿನ ಸದಸ್ಯರು ಮತ್ತು ಸ್ನೇಹಿತರಿಗೂ ಕೂಡ ಜೀವ ಬೆದರಿಕೆ ನೀಡುತ್ತಿದ್ದಾರೆ; ಆದರೆ ನೀವು ಮಹಾರಾಷ್ಟ್ರದಲ್ಲಿರುವುದರಿಂದ ನಿಮಗೆ ಯಾವುದೇ ಅಪಾಯ ಆಗುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಈ ಚಲನಚಿತ್ರವನ್ನು ನಾವು ಬಹಳ ಪ್ರೀತಿಯಿಂದ ನಿರ್ಮಿಸಿದ್ದೇವೆ. ಇದಕ್ಕೆ ಇಷ್ಟೊಂದು ದ್ವೇಷವನ್ನು ಎದುರಿಸಬೇಕಾಗುತ್ತದೆ ಎಂದು ನಮಗೆ ಅನಿಸಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಚಲನಚಿತ್ರದಲ್ಲಿ ಏನಿದೆ ?

ಇತ್ತೀಚಿಗೆ ‘ಹಮಾರೇ ಬಾರಹ ಚಲನಚಿತ್ರ’ ಕಾನ್ಸ್ ಫಿಲಂ ಫೆಸ್ಟಿವಲ್ ೨೦೨೪ ನಲ್ಲಿ ಪ್ರದರ್ಶನಗೊಂಡಿತ್ತು. ಚಲನಚಿತ್ರದ ನಾಯಕ ಓರ್ವ ಮುಸಲ್ಮಾನನಾಗಿದ್ದು ಅವನು ತನ್ನ ಧಾರ್ಮಿಕ ಶ್ರದ್ಧೆಗೆ ಬಾಧ್ಯನಾಗಿದ್ದಾನೆ ಎಂದು ತೋರಿಸಲಾಗಿದೆ. ಮತಾಂಧತೆಯ ನಂಬಿಕೆಯಿಂದ ೧೨ ನೆಯ ಮಗುವಿಗೆ ಜನ್ಮ ನೀಡುವಾಗ ಅವನ ಪತ್ನಿ ಸಾವನ್ನಪ್ಪುತ್ತಾಳೆ. ಇಸ್ಲಾಮ್ ಬಗ್ಗೆ ಹೊಸದಾಗಿ ಕಲಿಯುವ ಅವಕಾಶವೇ ತನಗೆ ಸಿಗುವುದಿಲ್ಲ ಎಂದು ಅವನು ತನ್ನ ಪತ್ನಿಯ ಗೋರಿಗೆ ಹೇಳುವ ಪ್ರಯತ್ನ ಮಾಡುತ್ತಾನೆ, ಹೀಗೆ ಈ ಚಿತ್ರದಲ್ಲಿ ತೋರಿಸಲಾಗಿದೆ.

ಸಂಪಾದಕೀಯ ನಿಲುವು

  • ಮುಸಲ್ಮಾನರ ಧರ್ಮದ ಬಗ್ಗೆ ಏನಾದರೂ ಮಾತಾಡಿದರೆ ಅಥವಾ ಬರೆದರೆ, ಅವರಿಗೆ ನೇರವಾಗಿ ಕೊಲ್ಲುವ ಬೆದರಿಕೆ ನೀಡಲಾಗುತ್ತದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ವಿಚಾರ ಅವರಿಗೆ ಎಂದಿಗೂ ಬರುವುದಿಲ್ಲ. ಈ ಬಗ್ಗೆ ಒಂದೇ ಒಂದು ರಾಜಕೀಯ ಪಕ್ಷ, ಜಾತ್ಯಾತೀತರು ಅಥವಾ ಪ್ರಗತಿ (ಅಧೋ ) ಪರರು ಬಾಯಿ ಬಿಡುವುದಿಲ್ಲ; ಆದರೆ ಭಾರತದಲ್ಲಿ ಮಾತ್ರ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ; ಎಂದು ಹೇಳುತ್ತಾ ಬೊಬ್ಬೆ ಹೊಡೆಯುತ್ತಾರೆ !
  • ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುವವರು ಈಗ ಎಲ್ಲಿದ್ದಾರೆ ? ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಹಿಂದೂ ಧರ್ಮದ ಬಗ್ಗೆ ಮಾತ್ರವೇ ?