ಪಟಿಯಾಲಾ (ಪಂಜಾಬ್) – ಒಂದು ವೇಳೆ 1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ನಾನು ಪ್ರಧಾನಿಯಾಗಿದ್ದರೆ ಪಾಕಿಸ್ತಾನದಿಂದ ಕರ್ತಾರಪುರ ಸಾಹೇಬ ಮರಳಿ ತೆಗೆದುಕೊಂಡಿರುತ್ತಿದ್ದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿ ಆಯೋಜಿಸಿದ್ದ ಒಂದು ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ದೇಶದ ವಿಭಜನೆಯ ಸಮಯದಲ್ಲಿ ಕರ್ತಾರಪುರ ಸಾಹೇಬ ಗುರುದ್ವಾರವು ಪಾಕಿಸ್ತಾನಕ್ಕೆ ಸೇರಿತು. ಕರ್ತಾರಪುರ ಸಾಹೇಬ ಗುರುದ್ವಾರ ಭಾರತದ ಗಡಿಯಿಂದ ಕೆಲವೇ ಕಿಲೋಮೀಟರುಗಳ ದೂರದಲ್ಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಮೋದಿಯವರು ಮಾತು ಮುಂದುವರಿಸಿ,
1. ದೇಶದ ವಿಭಜನೆಗೆ ಕಾಂಗ್ರೆಸ ಹೊಣೆ
2. 70 ವರ್ಷಗಳಿಂದ ನಾವು ಕರ್ತಾರಪುರ ಸಾಹೇಬ್ ಗುರುದ್ವಾರವನ್ನು ಭೂತಕನ್ನಡಿಯಿಂದ ನೋಡುತ್ತಿದ್ದೇವೆ. 1971 ರಲ್ಲಿ ಈ ಗುರುದ್ವಾರವು ಭಾರತಕ್ಕೆ ಬರಬಹುದಿತ್ತು. ಕಾಂಗ್ರೆಸ್ ಇದನ್ನು ಕೂಡ ಮಾಡಲಿಲ್ಲ. ಆದರೆ 2019 ರಲ್ಲಿ ನಮ್ಮ ಸರ್ಕಾರವು ಕರ್ತಾರಪುರ ಸಾಹೇಬ್ ಸ್ಥಳಕ್ಕೆ ಹೋಗುವ ಮಾರ್ಗವನ್ನು ತೆರೆಯಿತು.
3. ಮಾದಕ ವಸ್ತುಗಳ ಮಾಫಿಯಾ ಮತ್ತು ‘ಶೂಟರ್ಸ್ ಗ್ಯಾಂಗ್’ ಪಂಜಾಬ್ ಅನ್ನು ಆಳುತ್ತಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಮಾತ್ರ ಕಾಗದದಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ಪಂಜಾಬ್‌ನ ಪರಿಸ್ಥಿತಿಯೊಂದಿಗೆ ಯಾವುದೇ ಸಂಬಂಧವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ಹೇಗೆ ಅಭಿವೃದ್ಧಿ ಹೊಂದಬಹುದು ? ಎಂದು ಪ್ರಶ್ನೆ ಕೇಳಿದರು.