Vote Jihad : ಮಧುಬನಿ(ಬಿಹಾರ)ಯಲ್ಲಿ ನಕಲಿ ಮತದಾನ ಮಾಡುವಾಗ ಬಂಧಿಸಲಾಗಿದ್ದ ೪ ಮುಸಲ್ಮಾನರನ್ನು ಗುಂಪೊಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ಬಿಡುಗಡೆಗೊಳಿಸಿದೆ !

ಮಧುಬನಿ (ಬಿಹಾರ) – ಇಲ್ಲಿ ಮೇ ೨೦ ರಂದು ಲೋಕಸಭಾ ಚುನಾವಣೆಯ ಮತದಾನ ನಡೆಯಿತು. ಆಗ ನಕಲಿ ಮತದಾನ ಮಾಡುವಾಗ ಸನಾವುಲ್ಲಾ ಎಂಬ ಹೆಸರಿನ ಪುರುಷನೊಂದಿಗೆ ಸಾದಿಯಾ ಶೇಖ, ಸಾಲೆಹಾ ಫಾತಿಮಾ ಮತ್ತು ಝಿನತ ಪರವೀನ ಎಂಬ ಹೆಸರಿನ ಮಹಿಳೆಯರನ್ನು ಬಂಧಿಸಲಾಯಿತು. ಅನಂತರ ರಾತ್ರಿ ೧೫೦ ಕ್ಕಿಂತಲೂ ಹೆಚ್ಚು ಮುಸಲ್ಮಾನರ ಗುಂಪು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ಆ ನಾಲ್ಕು ಜನರನ್ನು ಬಿಡಿಸಿತು. ಈ ಪ್ರಕರಣದ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ದಳವನ್ನು ಸ್ಥಾಪಿಸಿದೆ.

೧. ಇಲ್ಲಿಯ ಹಕ್ಕನಿಯ ಮದರಸಾ ದೇವರಾ ಬಂಧೌಲಿ ಈ ಮತದಾನ ಕೇಂದ್ರದಲ್ಲಿ ಈ ನಾಲ್ವರನ್ನು ನಕಲಿ ಮತದಾನ ಮಾಡುವಾಗ ಬಂಧಿಸಲಾಯಿತು. ಈ ನಾಲ್ವರನ್ನು ಢಾಲೆ ಪೊಲೀಸ ಠಾಣೆಯ ಪರಿಸರದಲ್ಲಿ ಇರಿಸಲಾಗಿತ್ತು, ಆಗ ಸ್ಥಳೀಯರು ಅಲ್ಲಿ ಗಲಾಟೆ ನಡೆಸಿದರು; ಆದರೆ ಪೊಲೀಸರು ಅವರನ್ನು ಓಡಿಸಿದರು; ಆದರೆ ಅನಂತರ ರಾತ್ರಿ ೧೫೦ ಕಿಂತಲೂ ಹೆಚ್ಚಿನ ಜನರ ಗುಂಪು ದಾಳಿ ನಡೆಸಿ ಬಂಧಿಸಲಾಗಿದ್ದ ನಾಲ್ಕು ಜನರನ್ನು ಬಿಡುಗಡೆಗೊಳಿಸಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ.

೨. ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯವಾದಿಗಳಾದ ಶಶಾಂಕ ಶೇಖರ ಝಾರವರು ಈ ಘಟನೆಯ ವಿಡಿಯೋ ಪ್ರಸಾರಗೊಳಿಸುತ್ತಾ `ಆಘಾತಕಾರಿ, ಮಹಮ್ಮದ ಸನಾವುಲ್ಲಾ ಮತ್ತು ೩ ಮುಸಲ್ಮಾನ ಮಹಿಳೆಯರನ್ನು ಬಿಹಾರದಲ್ಲಿನ ದರಭಂಗಾ, ಹಕ್ಕನೀಯ ಮದರಸಾ ಮತದಾನ ಕೇಂದ್ರದಿಂದ ಬಂದಿಸಲಾಗಿತ್ತು , ಏಕೆ ? ಏಕೆಂದರೆ ಅವರು ಬುರ್ಖಾ ಧರಿಸಿ ನಕಲಿ ಮತದಾನ ಮಾಡುತ್ತಿದ್ದರು. ಆನಂತರ ೧೦೦ – ೧೫೦ ಮುಸಲ್ಮಾನರ ಗುಂಪೊಂದು ರಾತ್ರಿ ಢಾಲೆ ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ಎಲ್ಲಾ ಆರೋಪಿಗಳನ್ನು ಪೊಲೀಸ ಠಾಣೆಯಿಂದ ಬಿಡುಗಡೆಗೊಳಿಸಿತು, ಎಂದು ಹೇಳಿದರು.

೩. ದರಭಂಗಾದ ಹಿರಿಯ ಪೊಲೀಸ ಅಧೀಕ್ಷಕರಾದ ಜಗುನಾಥ ರೆಡ್ಡಿಯವರು ಈ ಘಟನೆಯನ್ನು ಅನುಮೋದಿಸಿದ್ದಾರೆ. ಅವರು ಮಾತನಾಡುತ್ತ ದಾಳಿಯ ಪ್ರಕರಣದಲ್ಲಿ ೨೪ ಜನರ ಹೆಸರುಗಳಿವೆ ಮತ್ತು ೧೩೦ ಜನರು ಅಜ್ಞಾತರಾಗಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಹಾಗೂ ಇತರ ಸಾಕ್ಷಿಗಳ ಪರಿಶೀಲನೆ ನಡೆಯುತ್ತಿದೆ. ಈ ಪ್ರಕರಣದ ತನಿಖೆಯನ್ನು ಈಗ ದರಭಂಗಾದ ಪೊಲೀಸ ಅಧೀಕ್ಷಕರ ನೇತೃತ್ವದಲ್ಲಿನ ವಿಶೇಷ ತನಿಖಾ ದಳವು ನಡೆಸುತ್ತಿದೆ.

ಸಂಪಾದಕೀಯ ನಿಲುವು

  • ಇದರಿಂದ ಬಿಹಾರದಲ್ಲಿ ಕಾಡಿನ ರಾಜ್ಯ ಇಂದಿಗೂ ಇದೆಯೇ ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ ! ಪೋಲೀಸರಿಗೆ ತಮ್ಮ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಇದು ಅವರಿಗೆ ನಾಚಿಕೆಗೆಡು !
  • ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ, ಎಂದು ಹೇಳುವ ಕಾಂಗ್ರೆಸ, ತೃಣಮೂಲ ಕಾಂಗ್ರೆಸ, ಕಮ್ಯುನಿಸ್ಟ, ಸಮಾಜವಾದಿ ಪಕ್ಷ ಮುಂತಾದ ಪಕ್ಷಗಳಿಗೆ ಇದು ಕಪಾಳಮೋಕ್ಷವಾಗಿದೆ. ಅವರು ಈ ವಿಷಯದಲ್ಲಿ ತುಟಿ ಬಿಚ್ಚುವುದಿಲ್ಲ !