ಯೋಗಿ ಆದಿತ್ಯನಾಥ್ ಅವರನ್ನು ರಾವಣನಿಗೆ ಹೋಲಿಸಿದ ಕಾಂಗ್ರೆಸ್ಸಿನ ನಾಯಕ ನಾನಾ ಪಟೋಲೆ
ನವದೆಹಲಿ – ಭಾರತದ ಯಾವ ಭೂಭಾಗವನ್ನೂ ಸಹ ಚೀನಾ ಕಬಳಿಸಲಿಲ್ಲ, ಹಾಗೂ ಯಾವುದೇ ಪ್ರದೇಶದ ಮೇಲೆ ಅತಿಕ್ರಮಣ ನಡೆದಿಲ್ಲ. ನಾನಾ ಪಟೋಲೇ ಅವರಿಗೆ ಈ ಬಗ್ಗೆ ಅನುಮಾನವಿದ್ದರೆ ನಾನೇ ಅವರನ್ನು ಚೀನಾದ ಗಡಿಯ ಹತ್ತಿರ ಕರೆದುಕೊಂಡು ಹೋಗಲು ಸಿದ್ದನಿದ್ದೇನೆ, ಎಂದು ಅಸ್ಸಾಮಿನ ಮುಖ್ಯಮಂತ್ರಿ ಹಿಮ್ಮತ ಬಿಸ್ವ ಸರ್ಮಾ ಪೆಟೋಲೆ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.
ಮೇ ೨೧ ರಂದು ಕಾಂಗ್ರೆಸ್ಸಿನ ಮಹಾರಾಷ್ಟ್ರದಲ್ಲಿನ ನಾಯಕ ನಾನಾ ಪಟೋಲೆ ಅವರು ಮಾತನಾಡಿ, ಸೀತಾ ಮಾತೆಯನ್ನು ಅಪಹರಿಸಲು ರಾವಣ ಕಾವಿ ಬಟ್ಟೆ ತೊಟ್ಟು ಬಂದಿದ್ದನು. ಈಗ ಯೋಗಿ ಆದಿತ್ಯನಾಥ ಕಾವಿ ಬಟ್ಟೆ ಧರಿಸಿಕೊಂಡು ಬರುತ್ತಾರೆ. (ಪಟೋಲ್ ಇತರ ಪಂಥದ ಶ್ರದ್ಧಾಸ್ಥಾನಗಳ ಕುರಿತು ಈ ರೀತಿ ಮಾತನಾಡುವ ಧೈರ್ಯ ಮಾಡುವರೆ ? ಸಂಪಾದಕರು ) ಅವರು ಚೀನಾದ ಗಡಿಯಲ್ಲಿ ಅತಿಕ್ರಮಣದ ಬಗ್ಗೆ, ಬೆಲೆ ಏರಿಕೆ ಮತ್ತು ನಿರುದ್ಯೋಗ ಈ ಅಂಶಗಳ ಬಗ್ಗೆ ಏನು ಮಾತನಾಡಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ಸಿಗೆ ಸನಾತನ ಧರ್ಮದ ಬಗ್ಗೆ ದ್ವೇಷವಿದೇ ! – ಭಾಜಪ
ಪಟೋಲೆ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ ಭಾಜಪದ ವಕ್ತಾರರಾದ ಮನೀಶ್ ಶುಕ್ಲಾ, ಕಾಂಗ್ರೆಸ್ ಹಾಗೂ ಮೈತ್ರಿಕೂಟವು ಕೇಸರಿ ಬಣ್ಣವನ್ನು ದ್ವೇಷಿಸುತ್ತದೆ. ಅವರಿಗೆ ಸನಾತನ ಧರ್ಮದ ಬಗ್ಗೆ ದ್ವೇಷವಿದೆ. ಕಾಂಗ್ರೆಸ್ಸಿಗರೇ ‘ಕೇಸರಿ ಭಯೋತ್ಪಾದನೆ’ ಎಂಬ ಶಬ್ದವನ್ನು ಹುಟ್ಟುಹಾಕಿದ್ದರು ಎಂದು ಹೇಳಿದರು.