New Driving License Rules 2024 : ಇನ್ನು ಮುಂದೆ ಡ್ರೈವಿಂಗ್ ಲೈಸನ್ಸ್ ಗಾಗಿ ಆರ್ ಟಿ ಓ ಆಫೀಸಿಗೆ ಹೋಗುವ ಅವಶ್ಯಕತೆಯಿಲ್ಲ!

ಜೂನ್ ೧ ರಿಂದ ಹೊಸ ನಿಯಮ ಜಾರಿ !

ನವದೆಹಲಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನ ಪರವಾನಗಿಗೆ ಸಂಬಂಧಿಸಿದಂತೆ (‘ಚಾಲನಾ ಪರವಾನಗಿ’ ಗೆ ಸಂಬಂಧಿಸಿದಂತೆ) ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಜೂನ್ ಒಂದರಿಂದ ಈ ಹೊಸ ನಿಯಮ ಜಾರಿ ಆಗಲಿದೆ. ಈ ಹೊಸ ನಿಯಮದ ಪ್ರಕಾರ ಇನ್ನುಮುಂದೆ ಜನರು ಆರ್ ಟಿ ಓ ಆಫೀಸಿಗೆ ಹೋಗುವ ಆವಶ್ಯಕತೆಯಿಲ್ಲ. ವಾಹನ ಪರವಾನಗಿ ಬೇಕಾದವರು ಖಾಸಗಿ ಡ್ರೈವಿಂಗ್ ಸ್ಕೂಲಿನಲ್ಲಿಯೇ ಪರೀಕ್ಷೆ ನೀಡಬಹುದಾಗಿದ್ದು, ಅಲ್ಲಿಯೇ ಅವರಿಗೆ ಡ್ರೈವಿಂಗ್ ಲೈಸನ್ಸ್ ಕೂಡ ದೊರೆಯುವುದು. ವಾಯು ಮಾಲಿನ್ಯವನ್ನು ಹಿಡಿತಕ್ಕೆ ತರುವ ದೃಷ್ಟಿಯಿಂದ ಈ ಹೊಸ ನಿಯಮ ಜಾರಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸರಕಾರವು ಸುಮಾರು ೯ ಸಾವಿರ ವಾಹನಗಳು ಸ್ಕ್ರಾಪ್ ಎಂದು ತೆರೆವು ಗೊಳಿಸಲು ಮತ್ತು ವಾಯು ಮಾಲಿನ್ಯದ ಮಾನದಂಡಗಳನ್ನು ಸುಧಾರಿಸುವ ಪ್ರಯತ್ದಲ್ಲಿದೆ.

ಇತರ ಕೆಲವು ಮಹತ್ವಪೂರ್ಣ ನಿಯಮಗಳು !

೧ . ಅತಿ ವೇಗದಲ್ಲಿ ವಾಹನ ಚಲಾಯಿಸಿದರೆ ೧ ರಿಂದ ೨ ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
೨. ಅಪ್ರಾಪ್ತ ಹುಡುಗರು ವಾಹನ ಚಲಾಯಿಸುವುದು ಕಂಡು ಬಂದರೆ ಅವರಿಗೆ ೨೫ ಸಾವಿರ ರೂಪಾಯಿ ದಂಡ. ಇದಲ್ಲದೆ ವಾಹನ ಮಾಲೀಕನ ನೋಂದಣಿ ಕೂಡ ರದ್ದು ಪಡಿಸಲಾಗುವುದು. ಇದರ ಜೊತೆಗೆ ಸಂಬಂಧಿತ ಅಪ್ರಾಪ್ತ ವಾಹನ ಚಾಲಕನ ವಯಸ್ಸು ೨೫ ಆಗುವವರೆಗೆ ಡ್ರೈವಿಂಗ್ ಲೈಸನ್ಸ್ ಸಿಗುವುದಿಲ್ಲ.
೩ . ಲರ್ನಿಂಗ್ ಲೈಸನ್ಸ್ ಗಾಗಿ ೧೫೦ ರೂಪಾಯಿ ಶುಲ್ಕ ವಿಧಿಸಲಾಗುವುದು.
೪. ಡ್ರೈವಿಂಗ್ ಟೆಸ್ಟ್ ಗಾಗಿ ೩೦೦ ರೂಪಾಯಿ ನೀಡಬೇಕಾಗುವುದು.
೫. ಲೈಸನ್ಸ್ ಪಡೆಯುವುದಕ್ಕಾಗಿ ೨೦೦ ರೂಪಾಯಿ ಶುಲ್ಕವಿರುವುದು.
೬. ಲೈಸನ್ಸ್ ನ ವಿಳಾಸ ಅಥವಾ ಇತರ ಮಾಹಿತಿ ಬದಲಾಯಿಸಲು ೨೦೦ ರೂಪಾಯಿ ಶುಲ್ಕ ನೀಡಬೇಕಾಗುವುದು.

ಖಾಸಗಿ ಡ್ರೈವಿಂಗ್ ಸ್ಕೂಲ್ ಗಳಿಗೆ ಇದು ಅನಿವಾರ್ಯ

೧. ಕನಿಷ್ಠ ೧ ಎಕರೆ ಜಾಗ ಇರುವುದು ಆವಶ್ಯಕ !
೨. ನಾಲ್ಕು ಚಕ್ರದ ವಾಹನದ ತರಬೇತಿಗಾಗಿ ೨ ಎಕರೆ ಜಾಗ ಇರಬೇಕು !
೩. ವಾಹನ ಶಿಕ್ಷಕರು ಕನಿಷ್ಠ ಡಿಪ್ಲೊಮಾವನ್ನು ಹೊಂದಿರಬೇಕು, ಜೊತೆಗೆ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು!
೪. ತರಬೇತಿ ನೀಡದೆ ಪರವಾನಗಿ ನೀಡಿದರೆ ಆ ಡ್ರೈವಿಂಗ್ ಸ್ಕೂಲ್ ಗೆ ೫,೦೦೦ ರೂ. ದಂಡ ವಿಧಿಸಲಾಗುವುದು!