Beaten to Death by Liquor Mafia : ರಾಜಸ್ಥಾನ: ಮದ್ಯ ಮಫಿಯಾದಿಂದ ಓರ್ವನ ಹತ್ಯೆ !

೪೮ ಗಂಟೆಯಲ್ಲಿ ಇಬ್ಬರ ಬಂಧನ ನಾಲ್ವರು ನಾಪತ್ತೆ !

ಜಯಪುರ (ರಾಜಸ್ಥಾನ) – ರಾಜಸ್ಥಾನದಲ್ಲಿನ ಝಂಝುನೂ ಪ್ರದೇಶದಲ್ಲಿ ಮದ್ಯ ಮಾಫಿಯಾ ಗುಂಡಾಗಳು ಗೋಶಾಲೆಯಲ್ಲಿನ ಓರ್ವ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿದ್ದಲ್ಲದೇ ಅವನಿಗೆ ೬ ಗಂಟೆಗಳ ಕಾಲ ಹಿಂಸೆ ನೀಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯ ಹೆಸರು ರಾಮೇಶ್ವರ ವಾಲ್ಮೀಕಿ ಎಂದಾಗಿದ್ದು ಈ ದಾಳಿಯಲ್ಲಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆಯನ್ನು ಓರ್ವ ಅಪ್ರಾಪ್ತ ಆರೋಪಿ ವಿಡಿಯೋ ಮಾಡಿದ್ದು, ಹೃದಯವಿದ್ರಾವಕವಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಪೊಲೀಸರು ಈ ಪ್ರಕರಣ ದಾಖಲಿಸಿ ಕೊಲೆಗಾರರನ್ನು ಹುಡುಕಲು ಆರಂಭಿಸಿದ್ದು ೪೮ ಗಂಟೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆಯು ಝುಂಝುನೂ ಜಿಲ್ಲೆಯ ಬಾಲೋದ ಗ್ರಾಮದಲ್ಲಿ ಮೇ ೧೪ ರಂದು ನಡೆದಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಈ ಘಟನೆಯ ಮಾಹಿತಿ ಪೊಲೀಸರಿಗೆ ದೊರೆತಿದೆ.

ವಿಡಿಯೋದಲ್ಲಿನ ಆರೋಪಿಗಳು ೨೭ ವರ್ಷದ ರಾಮೇಶ್ವರನನ್ನು ಕೈಕಾಲು ಕಟ್ಟಿ ಅವನನ್ನು ನೆಲದ ಮೇಲೆ ಮಲಗಿಸಿದ್ದಾರೆ ಮತ್ತು ಅವನ ಮೇಲೆ ಅನೇಕ ಬಾರಿ ಹಲ್ಲೆ ಮಾಡಿದ್ದಾರೆ. ಬಾಲೋದ ಗ್ರಾಮದಲ್ಲಿ ಮದ್ಯ ಮಾಫಿಯಾ ಹಾಗೂ ಅಕ್ರಮ ಮದ್ಯ ತಯಾರಿಸುವವರಲ್ಲಿ ಶತ್ರುತ್ವವಿತ್ತು. ಇಂತಹದರಲ್ಲಿ ರಾಮೇಶ್ವರ ವಾಲ್ಮೀಕಿ ಎಂಬವನು ಅಕ್ರಮ ಮದ್ಯ ತಯಾರಿಸುವವರ ಸಂಪರ್ಕದಲ್ಲಿದ್ದಾನೆಂದು ಮದ್ಯ ಮಾಫಿಯಾಗಳಿಗೆ ಅವನ ಬಗ್ಗೆ ಅನುಮಾನವಿತ್ತು. ಆದ್ದರಿಂದ ಅವರು ರಾಮೇಶ್ವರನ ಅಪಹರಣ ಮಾಡಿ ಅವನಿಗೆ ಒಂದು ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಅವನ ಹತ್ಯೆ ಮಾಡಿದ್ದಾರೆ. ರಾಮೇಶ್ವರ ಒಂದು ಗೋಶಾಲೆಯಲ್ಲಿ ಕೂಡ ಕೆಲಸ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ದೇಶದಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿ ಮದ್ಯ ಮಾಫಿಯಾ, ಮರಳು ಮಾಫಿಯಾ, ಗಣಿಗಾರಿಕೆ ಮಾಫಿಯಾ ಇಂತಹ ಅಪರಾಧಿ ಗುಂಪುಗಳು ಕಾರ್ಯನಿರತವಾಗಿದೆ. ಸರಕಾರ ಇಂತಹ ಗುಂಪುಗಳನ್ನು ಮಟ್ಟ ಹಾಕಬೇಕು.