ನವ ದೆಹಲಿ : ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.) 8 ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಇವರೆಲ್ಲರಿಗೂ ಮದ್ರಾಸ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಸುಪ್ರೀಂ ಕೋರ್ಟ್, ರಾಷ್ಟ್ರೀಯ ಭದ್ರತೆ ಯಾವಾಗಲೂ ಮೊದಲ ಆದ್ಯತೆ ಇದೆ. ಈ ಆರೋಪಿಗಳು ಗಂಭೀರ ಆರೋಪದಡಿ ಕೇವಲ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದ್ದು, ಅವರನ್ನು ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಹೇಳಿದೆ.
1. ಈ ಕಾರ್ಯಕರ್ತರ ಜಾಮೀನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್, ಎನ್.ಐ.ಎ. ಯು ನ್ಯಾಯಾಲಯದ ಮುಂದೆ ಸಲ್ಲಿಸಿರುವ ವಸ್ತುಗಳ ಆಧಾರದ ಮೇಲೆ ಮೇಲ್ನೋಟಕ್ಕೆ ಪ್ರಕರಣ ಸಾಬೀತಾಗಿದೆ ಎಂದು ಹೇಳಿದೆ.
2. ಎನ್.ಐ.ಎ. ಯು ನ್ಯಾಯಾಲಯಕ್ಕೆ, ಆರೋಪಿಗಳು ತಮ್ಮ ಗುರಿಯಾಗಿಸಿಕೊಂಡಿರುವ ಆರ್.ಎಸ್. ಎಸ್. ಮುಖಂಡರ ಛಾಯಾಚಿತ್ರಗಳು ಪತ್ತೆಯಾಗಿವೆ. ಪಿ.ಎಫ್.ಐನ ಉದ್ದೇಶದ ಪ್ರಕಾರ, 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿತ್ತು ಎಂದು ಹೇಳಿದೆ.