ಸನಾತನದ ಬಗ್ಗೆ ಮನಸ್ಸನ್ನು ಕೆಡಿಸುವ ಸಿಬೈ ಅಧಿಕಾರಿಗಳ ಸಂಚನ್ನು ವಿಫಲಗೊಳಿಸಿದ ಭಾವೆ

ಶ್ರೀ. ವಿಕ್ರಮ ಭಾವೆ

೧. ಸನಾತನವು ಭಾವೆ ಇವರ ಊಟದಲ್ಲಿ ವಿಷ ಸೇರಿಸಿ ಅವರನ್ನು ಕೊಲ್ಲುವ ಸಂಚು ರೂಪಿಸಿರುವುದಾಗಿ ಅಧಿಕಾರಿಗಳು ಹೇಳುವುದು : ಬಂಧನದ ೨ ದಿನಗಳ ನಂತರ ತನಿಖಾ ಅಧಿಕಾರಿಯು ನನ್ನ ಬಳಿ ಬಂದು, ”ನಾವು ನಿಮ್ಮ ಆಶ್ರಮದ ವ್ಯವಸ್ಥಾಪಕರ ಫೋನ್‌ ‘ಟ್ಯಾಪ್’ ಮಾಡಿದ್ದೇವೆ. ಅವರು ಹೇಳುತ್ತಿದ್ದರು, ವಿಕ್ರಮ ಭಾವೆ ಇವರು ಈ ಮೊದಲು ಸಂಸ್ಥೆಗಾಗಿ ೫ ವರ್ಷ ಸೆರೆಮನೆ ಹೋಗಿದ್ದಾರೆ, ಈಗ ಮತ್ತೇ ಸೆರೆಮನೆಗೆ ಹೋಗುವ ಪ್ರಸಂಗ ಬಂದಿದೆ. ಈ ಬಾರಿ ಅವರು ಬಿಡುಗಡೆಯಾದ ನಂತರ ವಿಕ್ರಮ ಭಾವೆ ಇವರು ಸಂಸ್ಥೆಯಲ್ಲಿ ಯಾವುದಾದರೊಂದು ದೊಡ್ಡ ಹುದ್ದೆ ಕೇಳುವರು ಮತ್ತು ನಮಗೆ ‘ಇಲ್ಲ’ ಎನ್ನಲು ಆಗಲ್ಲ. ಹಾಗಾಗಿ ಈಗಲೇ ಅವರ ಊಟದಲ್ಲಿ ವಿಷ ಬೆರೆಸಿ ಕೊಂದು ಬಿಡೋಣ’’. ಈ ರೀತಿ ನಿಮ್ಮ ಸಂಸ್ಥೆಯ ಜನರೇ ನಿಮ್ಮನ್ನು ಕೊಲ್ಲಲು ಕಾಯುತ್ತಿದ್ದಾರೆ. ಹಾಗಾಗಿ ನೀನು ಹೇಳಿದರೆ ನಾನು ನಿನಗಾಗಿ ಹೊರಗಿನಿಂದ ಅಥವಾ ಆಶ್ರಮದಿಂದ ಬರುವ ಊಟ ನಿಲ್ಲಿಸಿ ನನ್ನ ಮನೆಯಿಂದ ನಿನಗಾಗಿ ಊಟ ತರುವೆನು’’, ಎಂದರು.

೨. ಆಶ್ರಮದ ವಿಷವನ್ನೂ ಪ್ರಸಾದವೆಂದು ಸೇವಿಸಲು ಸಿದ್ಧನಾಗಿರು ವೆನೆಂದು ಹೇಳಿದಾಗ ಅಧಿಕಾರಿಯು ಸಿಟ್ಟಿನಿಂದ ಹೊರಟು ಹೋಗುವುದು : ನನ್ನ ಮನಸ್ಸನ್ನು ಕೆಡಿಸಲು ತನಿಖಾಧಿಕಾರಿಯು ಬಳಸುತ್ತಿರುವ ಇದೊಂದು ಯುಕ್ತಿಯಾಗಿತ್ತು. ನಾನು ಅವರಿಗೆ, ”ನಾನು ನಿರಪರಾಧಿಯಾಗಿದ್ದರೂ ನೀವು ನನ್ನನ್ನು ಬಂಧಿಸಿದ್ದೀರಿ. ಹಾಗಾಗಿ ನಿಮ್ಮ ಮನೆಯ ನೀರು ಕುಡಿಯುವುದೂ ಪಾಪವಾಗಿದೆ. ಆಶ್ರಮದ ಬಗ್ಗೆ ಹೇಳಬೇಕೆಂದರೆ, ಆಶ್ರಮದ ವಿಷವೂ ನನಗೆ ಪ್ರಸಾದವೇ ಆಗಿದೆ. ನಾನು ಅದನ್ನು ತಿಂದು ಸತ್ತರೂ, ನನಗೆ ಮುಕ್ತಿ ಸಿಗುವುದು. ಹಾಗಾಗಿ ನಿಮ್ಮ ಮನೆಯ ಅನ್ನಕ್ಕಿಂತ ಆಶ್ರಮದ ವಿಷ ತಿನ್ನಲು ಹೆಚ್ಚು ಇಷ್ಟ ಪಡುತ್ತೇನೆ’’, ಎಂದೆನು. ಇದನ್ನು ಕೇಳಿ ಆ ಅಧಿಕಾರಿಯು ತಲೆತಗ್ಗಿಸಿ ಮತ್ತು ಸಿಟ್ಟಿನಿಂದ ಹೊರಟು ಹೋದರು.