ಛತ್ತೀಸ್‌ಗಢದಲ್ಲಿ ಪಿಕಪ್ ವಾಹನ ಕಂದಕಕ್ಕೆ ಬಿದ್ದು 19 ಮಂದಿ ಸಾವು

ಕವರ್ಧಾ (ಛತ್ತೀಸ್‌ಗಢ) – ಇಲ್ಲಿನ ಬಹಪಾನಿ ಪ್ರದೇಶದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ ಪ್ರಪಾತಕ್ಕೆ ಉರುಳಿದ್ದರಿಂದ 19 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 18 ಮಹಿಳೆಯರಿದ್ದು ಅವರೆಲ್ಲರೂ ಬುಡಕಟ್ಟು ಜನಾಂಗದವರಾಗಿದ್ದರು. ಈ ಪಿಕಪ್ ವಾಹನದಲ್ಲಿ ಸುಮಾರು 36 ಜನರು ಪ್ರಯಾಣಿಸುತ್ತಿದ್ದರು. ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ನಂತರ ಪೊಲೀಸರು ಮತ್ತು ಇತರ ಏಜೆನ್ಸಿಗಳು ಘಟನಾ ಸ್ಥಳಕ್ಕೆ ತಲುಪಿದ್ದು ಅವರಿಗೆ ಸಹಾಯ ಮಾಡುತ್ತಾ ಕಂದಕದಿಂದ ಅನೇಕ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸೇರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಈ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಸಂತಾಪ ಸೂಚಿಸಿದ್ದಾರೆ.