ಉತ್ತರಾಖಂಡ: 130 ರೂಪಾಯಿಗಾಗಿ ಸಾಜಿದ್‌ನಿಂದ ಸ್ನೇಹಿತ ನಿತಿನ್‌ನ ಕೊಲೆ !


ಹರಿದ್ವಾರ (ಉತ್ತರಾಖಂಡ) – ಕೇವಲ 130 ರೂಪಾಯಿಗಳಿಗಾಗಿ ಸಾಜಿದನು ನಿತೀನ ಹೆಸರಿನ ಹಿಂದೂ ಸ್ನೇಹಿತನ ಹತ್ಯೆ ಮಾಡಿದ್ದಾನೆ. ನಿತಿನ ಶವ ಮೇ 4 ರಂದು ಇಲ್ಲಿನ ಒಂದು ಸೇತುವೆಯ ಕೆಳಗೆ ಸಿಕ್ಕಿತ್ತು. ಕೊಲೆಯಾದ ಬಳಿಕ ಸಾಜಿದ ಪರಾರಿಯಾಗಿದ್ದನು. ಮೇ 19ರಂದು ಅವನನ್ನು ಬಂಧಿಸಲಾಗಿದೆ. ತದನಂತರ ಪೊಲೀಸರು ಪ್ರಸಾರಮಾಧ್ಯಮಗಳಿಗೆ ಈ ಸಂಪೂರ್ಣ ಪ್ರಕರಣದ ಮಾಹಿತಿಯನ್ನು ನೀಡಿದರು.

ಘಟನೆಗೆ ಸಂಬಂಧಿಸಿದಂತೆ ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕ ಪರಮೇಂದ್ರ ಸಿಂಗ್ ಡೊವಾಲ್ ಅವರು ಮಾತನಾಡಿ,

1. ಮೇ 4 ರಂದು ಪೊಲೀಸರಿಗೆ ರೂಡಕಿಯ ಸೋಲಾನಿ ಸೇತುವೆಯ ಕೆಳಗೆ ಒಂದು ಮೃತದೇಹ ಬಿದ್ದಿರುವ ಮಾಹತಿ ಸಿಕ್ಕಿತ್ತು. ಈ ಶವವನ್ನು ರೂಡಕಿಯ ಅಂಬರ ಕೆರೆಯ ಹತ್ತಿರ ವಾಸಿಸುವ ನಿತಿನದ್ದಾಗಿದೆಯೆಂದು ಕಂಡು ಬಂದಿತು. ಪೊಲೀಸರು ಅಪರಾಧ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

2. ವಿವಿಧ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಸಾಜಿದ್ ಬಗ್ಗೆ ನಮ್ಮ ಅನುಮಾನ ಬಲವಾಯಿತು.

3. ಸಾಜಿದನ ಮೊಬೈಲ ನಿರಂತರವಾಗಿ ಸ್ಥಗಿತಗೊಂಡಿತ್ತು. ಇದರಿಂದ 15 ದಿನ ಅವನು ನಮಗೆ ಸಿಗಲಿಲ್ಲ. ಕೊನೆಯಲ್ಲಿ ಮೇ 19 ರಂದು ಅವರ ಮೊಬೈಲ ಲೊಕೇಶನ ಸಿಕ್ಕಿದ್ದರಿಂದ ಅವನನ್ನು ಬಂಧಿಸುವಲ್ಲಿ ಯಶಸ್ಸನ್ನು ಪಡೆದರು.

4. ಪೊಲೀಸ್ ಠಾಣೆಯಲ್ಲಿ ಬಿಗಿಯಾಗಿ ತನಿಖೆ ನಡೆಸಿದಾಗ, ಅವನು ತನ್ನ ಅಪರಾಧವನ್ನು ಒಪ್ಪಿಕೊಂಡನು. ಆತ, ಕೆಲವು ದಿನಗಳ ಹಿಂದೆ ನಿತಿನ್ ಮತ್ತು ಅವನು ಮದ್ಯಪಾನ ಮಾಡಿದ್ದರು. ಮದ್ಯದ ನಶೆಯಲ್ಲಿ ನಿತಿನನು ಅವನಿಂದ 130 ರೂಪಾಯಿಗಳನ್ನು ಕಸಿದುಕೊಂಡಿದ್ದನು. ಇದರಿಂದ ಸಾಜಿದನಿಗೆ ಕೋಪ ಬಂದಿತ್ತು.

5. ಮೇ 4 ರಂದು ಸಾಜಿದನು ನಿತಿನನ್ನು ಸೊಲಾನಿ ಸೇತುವೆಯ ಕೆಳಗೆ ಒಬ್ಬನೇ ಕುಳಿತಿರುವುದನ್ನು ನೋಡಿ ಅವನ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿ ಓಡಿ ಹೋಗಿದ್ದನು.

ಸಂಪಾದಕೀಯ ನಿಲುವು

ಇದರಿಂದ ಅಲ್ಪಸಂಖ್ಯಾತರಲ್ಲಿ ಹತ್ಯೆ ವೃತ್ತಿ ಕಂಡು ಬರುತ್ತದೆ. ಕೊಲೆಗಾರ ಸಾಜಿದನಿಗೆ ಈಗ ಗಲ್ಲುಶಿಕ್ಷೆ ನೀಡುವುದು ಯೋಗ್ಯವಾಗಿದೆ !