ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದಲ್ಲಿ ಪ್ರಬಲ ಪ್ರತಾಪ ಸಿಂಗ್ ಜುದೇವ ಅವರ ನೇತೃತ್ವದಲ್ಲಿ, ಇತರ ಧರ್ಮದಲ್ಲಿನ 50 ಕುಟುಂಬಗಳ 120 ಜನರು ಹಿಂದೂ ಧರ್ಮಕ್ಕೆ ಘರ್ ವಾಪಸಿಯಾದರು. ಆಚಾರ್ಯ ಶ್ರೀ ಸತಾನಂದ ಮಹಾರಾಜಿಯವರ ಮಾರ್ಗದರ್ಶನದಲ್ಲಿ ಕಂಡಾರಿಯಲ್ಲಿರುವ ಶ್ರೀ ರಾಮಮಂದಿರದಲ್ಲಿ ‘ಶ್ರೀ ವನವಾಸಿ ರಾಮ ಕಥಾ’ ಆಯೋಜಿಸಲಾಗಿತ್ತು. ಬಲರಾಂಪುರ ಜಿಲ್ಲೆಯ ಕಾಂದ್ರಿಯಲ್ಲಿರುವ ಪುರಾತನ ಶ್ರೀರಾಮ ದೇವಸ್ಥಾನದಲ್ಲಿ ಭವ್ಯವಾದ ಕಲಶ ಯಾತ್ರೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಕಲಶ ಯಾತ್ರೆಯಲ್ಲಿ ಅಂದಾಜು 5 ಸಾವಿರ ಮಹಿಳೆಯರು ಸಹಭಾಗಿಯಾಗಿದ್ದರು. ಕಾಶಿ ಮತ್ತು ಪ್ರಯಾಗರಾಜನಿಂದ ಬಂದಿದ್ದ ಬ್ರಾಹ್ಮಣರ ಸಮ್ಮುಖದಲ್ಲಿ, ಅಂದಾಜು 50 ಲಕ್ಷ ಭಕ್ತರು ದೇವಾಲಯದ ಪ್ರದೇಶದಲ್ಲಿ ಶ್ರೀರಾಮನಾಮ ಜಪ ಮಾಡಿದರು.
120 people from 50 families do Gharwapasi under the leadership of Prabal Pratap Singh Judev @prabaljudevBJP in Chattisgarh
📍Kandari Balrampur, Chattisgarhpic.twitter.com/2NIW6cWTDS
— Sanatan Prabhat (@SanatanPrabhat) May 20, 2024
ರಾಮಕಥೆ ಕೇಳುವುದಕ್ಕಾಗಿ ಪ್ರಚಂಡ ಜನಸಾಗರವೇ ನೆರೆದಿತ್ತು. ಕಾರ್ಯಕ್ರಮದ ಕೊನೆಯ ದಿನ ಕೇಂದ್ರ ಸಚಿವ ದಿವಂಗತ ದಿಲೀಪ್ ಸಿಂಗ್ ಜುದೇವ್ ಅವರ ಪುತ್ರ ಪ್ರಬಲ ಪ್ರತಾಪ ಸಿಂಗ್ ಜುದೇವ್ ಅವರ ಮುಂದಾಳತ್ವದಿಂದ ‘ಘರ್ ವಾಪಸಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀರಾಮನ ಕಥೆಯಿಂದ ಪ್ರಭಾವಿತರಾಗಿ ಹಿಂದೂ ಧರ್ಮಕ್ಕೆ ಪ್ರವೇಶ ಮಾಡುವ ಜನರ ಪಾದಗಳನ್ನು ಪ್ರಬಲ ಪ್ರತಾಪ ಸಿಂಗ್ ಜಯದೇವ್ ಅವರು ತೊಳೆದರು.
ಶ್ರೀ ಹನುಮಾನ್ ಜಿ ಮಹಾರಾಜರು ಕಾರ್ಯಕ್ರಮದ ಆಯೋಜಕರಾಗಿದ್ದರು. ಅವರು 120 ಜನರನ್ನು ಹಿಂದೂ ಧರ್ಮಕ್ಕೆ ವಿಧಿವತ್ತಾಗಿ ಪ್ರವೇಶ ಮಾಡಿಸಿದರು. ಪ್ರಬಲ ಪ್ರತಾಪ ಸಿಂಗ್ ಜುದೇವ್ ಅವರು ಜಶ್‌ಪುರದ ರಾಜಮನೆತನದವರಾಗಿದ್ದು ಅವರು ಬಿಜೆಪಿಯ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.