Bhojshala Survey : ಕಂಭಗಳ ಮೇಲೆ ದೇವರ ಆಕೃತಿ ಪತ್ತೆ ! – ಧಾರ್ (ಮಧ್ಯಪ್ರದೇಶ)ನ ಭೋಜಶಾಲಾದಲ್ಲಿ ಸಮೀಕ್ಷೆ

ಬಿಳಿ ಕಲ್ಲಿನ ಮೇಲೆ ಕಮಲದ ಹೂವಿನ ಆಕಾರ ಪತ್ತೆ

ಧಾರ್ (ಮಧ್ಯಪ್ರದೇಶ) – ಪುರಾತತ್ವ ಇಲಾಖಾವತಿಯಿಂದ ಇಲ್ಲಿನ ಭೋಜಶಾಲಾ ಪರಿಸರದಲ್ಲಿನ ಸಮೀಕ್ಷೆ 60ನೇ ದಿನವೂ ಮುಂದುವರೆದಿದೆ. ಮೇ 19ರಂದು ಉತ್ಖನನದ ಸಂದರ್ಭದಲ್ಲಿ ಒಂದು ಬಿಳಿಯ ಕಲ್ಲು ಪತ್ತೆಯಾಗಿದ್ದು, ಅದರ ಮೇಲೆ ಕಮಲದ ಆಕಾರ ಕಂಡು ಬಂದಿದೆ. ಇದಾದ ನಂತರ ಹಿಂದೂ ಪಕ್ಷದ ಜನರ ನಂಬಿಕೆ ಹೆಚ್ಚಾಗುತ್ತಿದೆ. ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಇಂದೋರ್ ವಿಭಾಗೀಯ ಪೀಠದ ನಿರ್ದೇಶನದಂತೆ ಭೋಜಶಾಲೆಯ ಪರಿಸರದಲ್ಲಿ ಈ ಉತ್ಖನನ ನಡೆಯುತ್ತಿದೆ. ಜುಲೈ 4ರೊಳಗೆ ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ. ನೈಋತ್ಯ ದಿಕ್ಕಿನ ಒಂದು ಹೊಂಡ ಅಗೆಯುವಾಗ ಅಲ್ಲಿ 3 ಅಡಿ ಉದ್ದದ ಖಡ್ಗ ಪತ್ತೆಯಾಗಿದೆ ಹಾಗೆಯೇ ಅಲ್ಲಿ 2 ಕಂಬಗಳ ಸ್ವಚ್ಛತೆ ಮಾಡಿದನಂತರ ಈ ಕಂಬಗಳ ಮೇಲೆ ದೇವರ ಆಕೃತಿಗಳನ್ನು ಕೆತ್ತಿರುವುದು ಕಂಡುಬಂದಿದೆ.