ಸೂಕ್ತ ಸಮಯ ಬಂದಾಗ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತದೆ ! – ಡಾ. ಎಸ್. ಜೈಶಂಕರ್

ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ದಿಟ್ಟ ಹೇಳಿಕೆ !

ನವ ದೆಹಲಿ – ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ಅವರು ಒಂದು ರಾಷ್ಟ್ರೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ದಿಟ್ಟ ಹೇಳಿಕೆಗಳನ್ನು ನೀಡಿದ್ದಾರೆ. ಸೂಕ್ತ ಸಮಯ ಬಂದಾಗ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಬರುವುದು’ ಎಂದು ಸಂಪೂರ್ಣ ದೇಶಕ್ಕೆ ಅನಿಸುತ್ತಿದೆ. ‘ಕಾಶ್ಮೀರದಿಂದ ಕಲಂ 370 ಅನ್ನು ತೆಗೆದುಹಾಕಲಾಗುವುದು ಎಂದು ಯಾರಿಗಾದರೂ ಅನಿಸುತ್ತಿತ್ತೇ?’ ಎಂದು ಪ್ರಶ್ನಿಸುತ್ತಾ, ಅವರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಒಂದು ನಿರ್ದಿಷ್ಟ ನೀತಿಯನ್ನು ಹೊಂದಿದೆ ಎಂದು ಹೇಳಿದರು. ‘ಪಿಒಕೆ ಭಾರತಕ್ಕೆ ಸೇರಿದೆ ಮತ್ತು ನಾವು ಅದನ್ನು ತೆಗೆದುಕೊಳ್ಳುತ್ತೇವೆ’ ಎಂದು ಡಾ. ಜೈಶಂಕರ್ ದೃಢವಾಗಿ ಹೇಳಿದರು.

ಜೈಶಂಕರ್ ಮುಂದೆ ಮಾತನಾಡಿ,

1. 1949 ರಲ್ಲಿ ಪ್ರಧಾನಮಂತ್ರಿ ನೆಹರೂ ಅವರ ಕಾರಣ, ಕಾಶ್ಮೀರದ ಕೆಲವು ಭಾಗವನ್ನು ಪಾಕಿಸ್ತಾನವು ತನ್ನ ವಶಕ್ಕೆ ಪಡೆಯಿತು. ಅಲ್ಲಿಯ ಕೆಲವು ಭೂಮಿಯನ್ನು ಪಾಕಿಸ್ತಾನ ಚೀನಾಕ್ಕೆ ಹಸ್ತಾಂತರಿಸಿತು. ನೆಹರೂ ಕಾಲದ ತಪ್ಪಿನ ಬಗ್ಗೆ ಪ್ರಧಾನಮಂತ್ರಿ ಮೋದಿಯವರನ್ನು ಏಕೆ ದೂಷಿಸುತ್ತೀರಿ ?

2. ಕಲಂ 370 ತೆಗೆದ ನಂತರ ಕಾಶ್ಮೀರದ ಭವಿಷ್ಯ ಬದಲಾಯಿತು. ಪಾಕ್ ಆಕ್ರಮಿತ ಕಾಶ್ಮೀರ ಕೂಡ ಭಾರತದ ಅವಿಭಾಜ್ಯ ಅಂಗವಾಗಿದೆ. ಕೆಲವರ ತಪ್ಪಿನಿಂದಾಗಿ ಅದು ದೇಶದಿಂದ ದೂರವಾಯಿತು; ಆದರೆ ಸೂಕ್ತ ಸಮಯ ಬರುತ್ತಲೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

3. ಪಾಕ್ ಆಕ್ರಮಿತ ಕಾಶ್ಮೀರ ಖಂಡಿತವಾಗಿಯೂ ಭಾರತದಲ್ಲಿ ಸೇರುತ್ತದೆ; ಆದರೆ ಪ್ರತಿಯೊಂದು ವಿಷಯಕ್ಕೂ ಒಂದು ಸಮಯ ಬೇಕಾಗುತ್ತದೆ. ನಮಗೂ ಸಿದ್ಧತೆಯನ್ನು ಮಾಡಬೇಕಾಗುವುದು.

4. ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ದೊಡ್ಡ ಹೆಜ್ಜೆಗಳನ್ನು ಇಟ್ಟರೆ ಏನಾಗುತ್ತದೆಯೆಂದು ಎಲ್ಲರಿಗೂ ತಿಳಿದಿದೆ. ಅದರಲ್ಲಿ ದೊಡ್ಡ ಅಪಾಯವಿರುತ್ತದೆ. ಜಮ್ಮು ಮತ್ತು ಕಾಶ್ಮೀರದಿಂದ ಕಲಂ 370 ಅನ್ನು ತೆಗೆದುಹಾಕಲಾಗುತ್ತದೆ ಎಂದು ಯಾರಿಗಾದರೂ ಅನಿಸುತ್ತಿತ್ತೇ? ಆದರೆ ಎಲ್ಲವೂ ಎಷ್ಟು ಸುಲಭವಾಗಿ ನಡೆಯಿತು. ಅದಕ್ಕಾಗಿ, ನಾವು ಮೊದಲೇ ಸಿದ್ಧತೆಯನ್ನು ಮಾಡಿದ್ದೇವಲ್ಲವೇ? ಅಭಿವೃದ್ಧಿಯನ್ನು ಕೇಂದ್ರೀಕೃತಗೊಳಿಸಿದೆವು, ಒಂದು ಮಾದರಿಯನ್ನು ಸಿದ್ಧಪಡಿಸಿದೆವು. ಅದರ ಫಲ ಕೊಡಲೇ ಗಮನಕ್ಕೆ ಬಂತು.

ಮುಂದಿನ 6 ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ಸೇರಲಿದೆ ! – ಯೋಗಿ ಆದಿತ್ಯನಾಥ್

ಚುನಾವಣಾ ಪ್ರಚಾರ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ‘ಚುನಾವಣೆ ನಂತರ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲಿದ್ದಾರೆ. ಮುಂದಿನ ಆರು ತಿಂಗಳೊಳಗೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ಮತ್ತೆ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.