Ahmedabad Teacher Attacked : ಮದರಸಾಗಳ ಸಮೀಕ್ಷೆ ನಡೆಸುತ್ತಿದ್ದ ಓರ್ವ ಶಿಕ್ಷಕರ ಮೇಲೆ ಮತಾಂಧರಿಂದ ದಾಳಿ !

ಕರ್ಣಾವತಿ (ಗುಜರಾತ) – ಗುಜರಾತ ಸರಕಾರದ ಆದೇಶದ ಮೇರೆಗೆ ಮೇ ೧೮ ರಿಂದ ರಾಜ್ಯದಲ್ಲಿ ಮದರಸಾಗಳ ಸರ್ಮಿಕ್ಷೆ ಆರಂಭವಾಗಿದೆ. ಕರ್ಣಾವತಿಯ ದರಿಯಾಪುರದಲ್ಲಿನ ಸುಲ್ತಾನ ಮೊಹಲ್ಲಾದಲ್ಲಿನ ಒಂದು ಮದರಸಾದ ಸಮೀಕ್ಷೆಯ ವೇಳೆ ಸಮೀಕ್ಷಾ ತಂಡದಲ್ಲಿನ ಆಚಾರ್ಯ ಸಂದೀಪ ಪಟೇಲ್ ಎಂಬ ಸಿಬ್ಬಂದಿಯ ಮೇಲೆ ೧೦ ಜನರ ಗುಂಪು ದಾಳಿ ನಡೆಸಿದೆ. ಪಟೇಲ್ ಅವರು ಸರಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಈ ದಾಳಿಯ ಬಳಿಕ ಅಲ್ಲಿ ೧೦೦ ಕ್ಕಿಂತಲೂ ಹೆಚ್ಚಿನ ಜನರು ಸೇರಿ ಅವರು ಕೂಡ ಪಟೇಲ್ ಅವರನ್ನು ಥಳಿಸಲು ಯತ್ನಿಸಿದರು. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ .

೧. ರಾಷ್ಟ್ರೀಯ ಬಾಲ ಅಧಿಕಾರ ಸಂರಕ್ಷಣಾ ಆಯೋಗದ (ಎನ್. ಸಿ.ಪಿ.ಆರ್.ದ ) ಆದೇಶದ ಮೇರೆಗೆ ರಾಜ್ಯದ ಎಲ್ಲಾ ಮದರಸಾಗಳ ಸಮೀಕ್ಷೆ ನಡೆಯುತ್ತಿದೆ. ಇದರ ಅಂತರ್ಗತ ಮದರಸಾಗಳು ಮತ್ತು ಅಲ್ಲಿ ಕಲಿಯುವ ಮುಸಲ್ಮಾನನೇತರ ಮಕ್ಕಳ ನಿಧಿ ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

೨. ಸದ್ಯ ಸಂಪೂರ್ಣ ಗುಜರಾತಿನಲ್ಲಿ ೧ ಸಾವಿರದ ೨೦೦ ಮದರಸಾಗಳಿವೆ. ಕರ್ಣಾವತಿ ನಗರದಲ್ಲಿಯೇ ೧೭೫ ಮದರಸಾಗಳು ಮತ್ತು ಕರ್ಣಾವತಿಯ ಗ್ರಾಮೀಣ ಭಾಗದಲ್ಲಿ ೩೦ ಮದರಸಾಗಳಿವೆ. ಇವುಗಳ ಸಮೀಕ್ಷೆ ನಡೆದ ಬಳಿಕ ಶಿಕ್ಷಣ ಇಲಾಖೆಗೆ ವರದಿ ಕಳುಹಿಸಲಾಗುವುದು. ಸಮೀಕ್ಷೆಗಾಗಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿ ಎಲ್ಲಾ ಜಿಲ್ಲೆಯ ಶಿಕ್ಷಣಾಧಿಕಾರಿಗಳ ಕಡೆಗೆ ಕೆಲಸ ಒಪ್ಪಿಸಿದ್ದು ಇದರಲ್ಲಿ ಒಟ್ಟು ೧೧ ಪ್ರಕರಣಗಳಲ್ಲಿ ವಿಚಾರಣೆಯ ಆದೇಶ ನೀಡಲಾಗಿದೆ.

ಸಂಪಾದಕೀಯ ನಿಲುವು

ಗುಜರಾತದಲ್ಲಿ ಬಿಜೆಪಿ ಸರಕಾರ ಇರುವಾಗ ಇಂತಹ ಘಟನೆಗಳು ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ !