ಇಸ್ರೋದಿಂದ ಶೀಘ್ರದಲ್ಲೇ ಮಂಗಳ ಗ್ರಹದ ಮೇಲೆ ಯಾನ ಇಳಿಸಲಿದೆ !

ಬೆಂಗಳೂರು – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೋ’ ಮಂಗಳ ಗ್ರಹದ ಮೇಲೆ ರೋವರ್ (ಒಂದು ರೀತಿಯ ವಾಹನ) ಮತ್ತು ಹೆಲಿಕಾಪ್ಟರ್ ಅನ್ನು ಇಳಿಸಲಿದೆ. ಇಲ್ಲಿಯವರೆಗೆ ಅಮೇರಿಕಾ ಮತ್ತು ಚೀನಾ ಮಾತ್ರ ಇದನ್ನು ಸಾಧಿಸಿವೆ. ಈ ಹೊಸ ಪ್ರಾಜೆಕ್ಟ್ ‘ಮಂಗಳಯಾನ-2’ ಎಂದು ಹೆಸರಿಸಲಾಗಿದೆ.

ಇಸ್ರೋ ಸುಧಾರಿತ ‘ಸ್ಕೈ ಕ್ರೇನ್’ ಮೂಲಕ ಮಂಗಳದ ಮೇಲೆ `ರೋವರ’ ಅನ್ನು ಇಳಿಸಲಿದೆ. ನಾಸಾದ ‘ರೋವರ್’ ಅನ್ನು ಇಳಿಸುವ ಈ ಕಾರ್ಯಾಚರಣೆಯಿಂದ ಸ್ಫೂರ್ತಿ ಪಡೆಯಲಾಗಿದೆ. ಇದರಿಂದ ಸವಾಲಿನ ಪರಿಸ್ಥಿತಿಗಳಲ್ಲಿಯೂ ಸುರಕ್ಷಿತ ಮತ್ತು ನಿಖರವಾದ ಲ್ಯಾಂಡಿಂಗ್ ಅನ್ನು ಖಚಿತಪಡಿಸುತ್ತದೆ.