UN Expresses Condolence: ಗಾಝಾದಲ್ಲಿ ಭಾರತೀಯ ಅಧಿಕಾರಿಯ ಸಾವಿನ ಬಗ್ಗೆ ವಿಶ್ವಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರೆಸ, ವಿಶ್ವಸಂಸ್ಥೆಯ ಭದ್ರತಾ ಸೇವೆಯ ಸಂಯೋಜಕರಾಗಿದ್ದ ಕರ್ನಲ್ ವೈಭವ್ ಅನಿಲ್ ಕಾಳೆ

ನ್ಯೂಯಾರ್ಕ್ – ಗಾಝಾದಲ್ಲಿ ಭಾರತೀಯ ಸೇನೆಯ ಮಾಜಿ ಅಧಿಕಾರಿಯೊಬ್ಬರ ಸಾವಿನ ಬಗ್ಗೆ ವಿಶ್ವಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ ಹಾಗೂ ಭಾರತದ ಕ್ಷಮೆಯಾಚಿಸಿದೆ. ದಕ್ಷಿಣ ಗಾಜಾದ ರಫಾ ನಗರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಸೇವೆಯ ಸಂಯೋಜಕರಾಗಿದ್ದ ಕರ್ನಲ್ ವೈಭವ್ ಅನಿಲ್ ಕಾಳೆ (46 ವರ್ಷ) ಅವರ ವಾಹನದ ಮೇಲೆ ನಡೆದ ದಾಳಿಯಲ್ಲಿ ಅವರು ಮರಣ ಹೊಂದಿದ್ದಾರೆ. ಕರ್ನಲ್ ವೈಭವ್ ಅನಿಲ್ ಕಾಳೆಯವರು 2022 ರಲ್ಲಿ ಭಾರತೀಯ ಸೇನೆಯಿಂದ ಅವಧಿಪೂರ್ವ ನಿವೃತ್ತಿಯನ್ನು ಪಡೆದಿದ್ದರು ಮತ್ತು ಸಧ್ಯಕ್ಕೆ ಅವರು ಭದ್ರತಾ ವಿಭಾಗದಲ್ಲಿ ಭದ್ರತಾ ಸೇವೆಯ ಸಮನ್ವಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರೆಸ ಇವರ ಸಹಾಯಕ ವಕ್ತಾರ ಫರಹಾನ್ ಹಕ್ ಇವರು ಒಂದು ಮನವಿಯನ್ನು ಪ್ರಸಾರ ಮಾಡಿ, ಕರ್ನಲ್ ವೈಭವ್ ಅನಿಲ್ ಕಾಳೆಯವರ ಸಾವಿನ ಬಗ್ಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಗಾಝಾದಲ್ಲಿ ಸದ್ಯಕ್ಕೆ ವಿಶ್ವಸಂಸ್ಥೆಯ 71 ಅಂತರರಾಷ್ಟ್ರೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.