ನವ ದೆಹಲಿ – ಕೆಲವು ದಿನಗಳ ಹಿಂದಿನಿಂದ ದೆಹಲಿಯಲ್ಲಿ ೧೦೦ ಕ್ಕಿಂತಲೂ ಹೆಚ್ಚಿನ ಶಾಲೆಗಳಿಗೆ ಹಾಗೂ ಕೆಲವು ವಿಮಾನ ನಿಲ್ದಾಣಗಳನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಬೆದರಿಕೆಗಳು ನೀಡಲಾಗುತ್ತಿದೆ; ಆದರೆ ಇದು ವದಂತಿ ಎಂದು ಬೆಳಕಿಗೆ ಬಂದಿದೆ. ಈಗ ಮೇ ೧೪ ರಂದು ದೆಹಲಿಯಲ್ಲಿನ ಅನೇಕ ಆಸ್ಪತ್ರೆಗಳನ್ನು ಬಾಂಬ್ ನಿಂದ ಸ್ಫೋಟಿಸುವ ಬೆದರಿಕೆ ನೀಡಲಾಗಿದೆ. ಇದರಲ್ಲಿ ದೀಪಚಂದ ಬಂಧು, ದಾದಾ ದೇವ, ಹೆಡಗೇವಾರ ಮತ್ತು ಜಿಟಿವಿ ಆಸ್ಪತ್ರೆ ಸೇರಿವೆ. ಪೊಲೀಸರು ಆಸ್ಪತ್ರೆಯ ಪರಿಶೀಲನೆ ಮಾಡಿದಾಗ ಏನು ದೊರೆಯಲಿಲ್ಲ.
ಮೇ ೧೪ ರಂದು ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮಣಪುರಿ (ಲಖನೌ)ಯಲ್ಲಿ ೪ ಶಾಲೆಗಳಿಗೆ ಬಾಂಬ್ ಬೆದರಿಕೆ ನೀಡಲಾಗಿತ್ತು. ಬಳಿಕ ಎಲ್ಲಾ ಶಾಲೆಗಳನ್ನು ಪೊಲೀಸರು ಪರಿಶೀಲಿಸಿದಾಗ ಅಲ್ಲಿ ಏನೂ ದೊರೆತಿರಲಿಲ್ಲ. ಅದೇ ದಿನ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿನ ೫೬ ಶಾಲೆಗಳಿಗೂ ಕೂಡ ಇದೇ ರೀತಿ ಬೆದರಿಕೆ ನೀಡಲಾಗಿತ್ತು.
ಸಂಪಾದಕೀಯ ನಿಲುವುಕಳೆದ ಕೆಲವು ದಿನಗಳಿಂದ ದೇಶದಲ್ಲಿ ಶಾಲೆ, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು ಇವುಗಳನ್ನು ಬಾಂಬ್ ಮೂಲಕ ಸ್ಫೋಟಿಸುವ ಸುಳ್ಳು ಬೆದರಿಕೆ ನೀಡಿ ಪೊಲೀಸರ ಮೇಲೆ ಒತ್ತಡ ನಿರ್ಮಾಣ ಮಾಡುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದಿನ ಜನರ ಬಗ್ಗೆ ಆಳವಾಗಿ ಪರಿಶೀಲನೆ ನಡೆಸುವುದು ಆವಶ್ಯಕವಾಗಿದೆ ! |