‘ನಾನು ಕ್ರೈಸ್ತ ಆಗಿದ್ದರಿಂದ ಸಾವನ್ನು ಎದುರಿಸಲು ಸಾಧ್ಯವಾಯಿತಂತೆ’ – ನಟಿ ಮೋಹಿನಿ ಶ್ರೀನಿವಾಸನ್

ಹಾಗಿದ್ದರೆ, ಕ್ರೈಸ್ತ ದೇಶಗಳಲ್ಲಿ ಇಂದು ಹೆಚ್ಚು ಆತ್ಮಹತ್ಯೆಗಳು ಏಕೆ ಆಗುತ್ತಿವೆ ? – ಜನತೆಯ ಪ್ರಶ್ನೆ

ಬೆಂಗಳೂರು – ‘ಕಲ್ಯಾಣ ಮಂಟಪ’ ಚಲನಚಿತ್ರದ ಮೂಲಕ ಕನ್ನಡ ಸಮಾಜದಲ್ಲಿ ಗುರುತಿಸಿಕೊಂಡಿರುವ ತಮಿಳು ನಟಿ ಮೋಹಿನಿ ಶ್ರೀನಿವಾಸನ್ ಇವರ ಒಂದು ಹೇಳಿಕೆ ಹೊರಬಿದ್ದಿದೆ. ಅವರು ತಮಿಳು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ನಾನು ಮತಾಂತರಗೊಳ್ಳದಿದ್ದರೆ, ನಾನು ಉಳಿಯುತ್ತಿರಲಿಲ್ಲ” ಎಂದು ಹೇಳಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ! ಎಂದು ಹೇಳಿದ್ದಾರೆ.

1. ಮೋಹಿನಿ 2006 ರಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ತನ್ನ ಸ್ವಂತ ಅನುಭವಗಳನ್ನು ಹೇಳುವಾಗ ಅವರು, ಕೆಲವೊಮ್ಮೆ ‘ನಾನೇಕೆ ಬದುಕಬೇಕು?’, ‘ನನಗೇಕೆ ಬೇಕು ಈ ಜೀವನ?’ ಎಂಬಂಥ ಯೋಚನೆಗಳು ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು. ಬಳಿಕ ನಾನು ಹತಾಶೆಗೆ ಹೋದೆ. ತುಂಬಾ ಕೆಟ್ಟ ಕನಸುಗಳು ಬರಲಾರಂಭಿಸಿದವು. ನನಗೆ ನಿದ್ದೆ ಬರುತ್ತಿರಲಿಲ್ಲ. ಆರೋಗ್ಯವೂ ಹದಗೆಟ್ಟಿತು. ಇದಾದ ನಂತರ ನಾನು ಜ್ಯೋತಿಷ್ಯ ಮೊದಲಾದವರನ್ನು ಭೇಟಿಯಾದೆ; ಆದರೆ ನನಗೆ ಏನೂ ಲಾಭವಾಗಲಿಲ್ಲ. ಇಷ್ಟೆಲ್ಲಾ ಆದ ಮೇಲೆ ದೇವರು ಯಾರು ? ಎಂಬುದನ್ನು ಹುಡುಕಲು ಪ್ರಾರಂಭಿಸಿದೆ. ಆಗ ಯೇಸು ಕ್ರಿಸ್ತನು ನನ್ನ ಕನಸಿನಲ್ಲಿ ಬಂದನು. ಈ ಕನಸಿನ ನಂತರ ನಾನು ಸ್ವಾತಂತ್ರ್ಯವನ್ನು ಅನುಭವಿಸಲು ಪ್ರಾರಂಭಿಸಿದೆ. ಕೆಟ್ಟ ಕನಸುಗಳು ಕ್ರಮೇಣ ಕಡಿಮೆಯಾಗತೊಡಗಿದವು. ನನ್ನ ಆರೋಗ್ಯ ಸುಧಾರಿಸತೊಡಗಿತು. ಆತ್ಮಹತ್ಯೆಯ ಆಲೋಚನೆಗಳು ನಿಂತುಹೋದವು. ಮನಸ್ಸು ಶಾಂತವಾಗತೊಡಗಿತು. ನಿಜ ಹೇಳಬೇಕೆಂದರೆ, ಜೀಸಸ್ ನೇ ಅನೇಕ ಬಾರಿ ನನ್ನನ್ನು ರಕ್ಷಿಸಿದ್ದಾರೆ.

2. ಮೋಹಿನಿ ಮಾತನ್ನು ಮುಂದುವರೆಸುತ್ತಾ, ಒಮ್ಮೆ ನನ್ನ ತಲೆಯಲ್ಲಿ ಕೆಟ್ಟ ಆಲೋಚನೆಗಳು ಬಂದಾಗ ಚಾಕುವಿನಿಂದ ಕೈಗೆ ಗಾಯ ಮಾಡಿಕೊಂಡೆ. ಒಮ್ಮೆ ಕೋಕಾಕೋಲಾಗೆ ಇಲಿ ವಿಷ ಬೆರೆಸಿ ಕುಡಿದೆ. ದೇಹಕ್ಕೆ ಏನಾದರೂ ಆಗುವುದೆಂದು ನಾನು ಕಾಯುತ್ತಿದ್ದೆ; ಆದರೆ ನನಗೆ ಏನೂ ಆಗಲಿಲ್ಲ. ಒಮ್ಮೆ ನಾನು 136 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡೆ. ಈ ಎಲ್ಲಾ ಪ್ರಕರಣಗಳಲ್ಲಿ ಯೇಸು ನನ್ನನ್ನು ರಕ್ಷಿಸಿದ್ದಾನೆ ಎಂದೂ ಅವರು ದಾವೆ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಹಾಗಿದ್ದರೆ, ಕ್ರೈಸ್ತ ದೇಶಗಳಾದ ಲಿಥುವೇನಿಯಾ, ಹಂಗೇರಿ, ಎಸ್ಟೋನಿಯಾ ಮತ್ತು ಅಮೆರಿಕಗಳಲ್ಲಿ ಇಂದು ಹೆಚ್ಚು ಆತ್ಮಹತ್ಯೆಗಳು ಏಕೆ ಆಗುತ್ತಿವೆ ? ಮೊದಲು ಇದಕ್ಕೆ ನಟಿ ಮೋಹಿನಿ ಉತ್ತರಿಸಬೇಕು !

ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂಗಳ ವಿರುದ್ಧ ತಾರತಮ್ಯ ಮಾಡುವ ಕುತಂತ್ರವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !