ಪಟಿಯಾಲಾ (ಪಂಜಾಬ) ಇಲ್ಲಿಯ ಕೇಂದ್ರ ಕಾರಾಗೃಹದಿಂದ ಸೂತ್ರಗಳ ಕಾರ್ಯರೂಪ !
ನವ ದೆಹಲಿ – ಜಗತ್ತಿನಲ್ಲಿನ ೫ ದೇಶಗಳಲ್ಲಿ ವಾಸಿಸುವ 5 ಖಲಿಸ್ತಾನಿ ಭಯೋತ್ಪಾದಕರು ಭಾರತದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ ಎಂದು ಭಾರತದ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದೆ. ಈ ಭಯೋತ್ಪಾದಕರು ‘ಎಕ್ಸ್ಪ್ಲೋರ್ ಖಲಿಸ್ತಾನಿ’ ಯೋಜನೆ ರೂಪಿಸಿದ್ದೂ ಪಂಜಾಬದ ಪಟಿಯಾಲಾದ ಕೇಂದ್ರ ಕಾರಾಗೃಹದಿಂದ ಅದರ ಸೂತ್ರಗಳು ಕಾರ್ಯ ಅನ್ವಿತಗೊಳಿಸಲಾಗುತ್ತಿದ್ದವು. ಗುಪ್ತಚರ ಇಲಾಖೆಯ ಮಾಹಿತಿಯ ನಂತರ ಗೃಹ ಸಚಿವಾಲಯವು ಈ ಪ್ರಕರಣವನ್ನು ಎನ್.ಐ.ಎ. ಗೆ ವಹಿಸಿದರು.
೧. ಸಂಯುಕ್ತ ಅರಬ್ ಅಮಿರಾತನಲ್ಲಿ ವಾಸಿಸುವ ಪಂಜಾಬ ಮೂಲದ ಮೌರ ಕಲಾ ಗ್ರಾಮದ ನಿವಾಸಿ ಬಲಜಿತ ಸಿಂಹ ಅಲಿಯಾಸ್ ಬಲಜೀತ ಮೌರ್, ಆಸ್ಟ್ರೇಲಿಯಾದಲ್ಲಿ ನಿವಾಸಿ ಗುರಜಂಟ ಸಿಂಹ ಅಲಿಯಾಸ್ ಜಂಟಾ, ಕೆನಡಾದಲ್ಲಿನ ಪ್ರಿನ್ಸ್ ಚೌಹಾನ್, ಅಮೇರಿಕಾದ ಅಮನ್ ಪುರೇವಾಲ ಮತ್ತು ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಬಿಲಾಲ ಮಾನಶೇರ್ ಇವರು ಈ ಷಡ್ಯಂತ್ರಗಳು ರೂಪಿಸಿದ್ದರು.
೨. ಈ ಐದೂ ಜನರು ಖಲಿಸ್ತಾನ್ ಟೈಗರ್ ಫೋರ್ಸ್ (ಕೆ.ಟಿ.ಎಫ್.) ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದರು. ಅವರು ಪಟಿಯಾಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕ ಕಮಲಜೀತ ಶರ್ಮಾಗೆ ಸಂಪರ್ಕಿಸಿದರು. ಅವನಿಗೆ ಪಂಜಾಬದಲ್ಲಿ ಖಲಿಸ್ತಾನಿ ಜಾಲ ಸದೃಢಗೊಳಿಸಿ ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಾಗಿ ಹಣ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿತ್ತು.
೩. ಕಮಲಜಿತ ಹೊಸದಾಗಿ ಸೇರಿರುವ ಭಯೋತ್ಪಾದಕರಿಂದ ಈ ಕೆಲಸ ಮಾಡಿಸಿಕೊಳ್ಳುತ್ತಿದ್ದನು. ಇತ್ತೀಚಿಗೆ ಎನ್.ಐ.ಎ. ಇಂದ ಜೈಲಿನಲ್ಲಿ ಕಮಲಜಿತನ ವಿಚಾರಣೆ ನಡೆಸಿದರು.
೪. ಪಂಜಾಬದಿಂದ ಹವಾಲಾ ಮೂಲಕ ಸಂಯುಕ್ತ ಅರಬ್ ಅಮೀರಾತ, ಅಮೇರಿಕಾ, ಆಸ್ಟ್ರೇಲಿಯಾ, ಕೆನಡಾ ಮತ್ತು ಪಾಕಿಸ್ತಾನದಲ್ಲಿ ಕೋಟ್ಯಾಂತರ ರೂಪಾಯಿ ಕಳುಹಿಸಲಾಗುತ್ತಿದೆ. ವಿಚಾರಣೆಯಲ್ಲಿ ಹವಾಲಾ ಮೂಲಕ ಈ ಹಣ ನೇರವಾಗಿ ಯಾರಿಗೆ ಸಿಗುತ್ತಿದೆ, ಇದು ತಿಳಿಯಿತು. ಪಂಜಾಬದಿಂದ ೫ ದೇಶಗಳಲ್ಲಿ ಕಳುಹಿಸಲಾಗುವ ಹಣ ಖಲಿಸ್ತಾನ ಟೈಗರ್ ಫೋರ್ಸ್ ಜೊತೆಗೆ ಸಂಬಂಧಿತ ಬೇರೆ ಬೇರೆ ಭಯೋತ್ಪಾದಕರಿಗೆ ತಲುಪುತ್ತದೆ. ಹೆಚ್ಚಿನ ತನಿಖೆ ನಡೆಸಿದ ನಂತರ ಈ ಕೋಟ್ಯಾಂತರ ರೂಪಾಯಿ ಪಂಜಾಬದ ಪಟಿಯಾಲಾದಿಂದ ಇತರ ದೇಶಗಳಿಗೆ ಕಳುಹಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ.
ಸಂಪಾದಕೀಯ ನಿಲುವುಖಲಿಸ್ತಾನಿ ಭಯೋತ್ಪಾದನೆಯು ಭಾರತದ ಅಸ್ತಿತ್ವ ಪ್ರಶ್ನೆಯಾಗುತ್ತಿರುವುದರಿಂದ ಅದನ್ನು ನಾಶಗೊಳಿಸುವುದು ಆವಶ್ಯಕವಾಗಿದೆ, ಇದೇ ಈ ಘಟನೆಯಿಂದ ಕಂಡು ಬರುತ್ತದೆ ! |