ನವ ದೆಹಲಿ – ಭಾರತ ಮತ್ತು ಚೀನಾದ ನಡುವಿನ ಬಾಕಿ ಇರುವ ಪ್ರಶ್ನೆಗಳನ್ನು ಪರಿಹರಿಸುವುದು ಎಂದು ಆಸೆ ಇದೆ. ಉಭಯ ದೇಶದಲ್ಲಿನ ದ್ವಿಪಕ್ಷಿಯ ಸಂಬಂಧ ಸಾಮಾನ್ಯವಾದ ನಂತರವೇ ಗಡಿಯಲ್ಲಿ ಶಾಂತಿ ನೆಲೆಸಬಹುದು, ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ ಇವರು ಒಂದು ಸಂದರ್ಶನದಲ್ಲಿ ಹೇಳಿದರು. ಅವರು, ಬಾಕಿ ಇರುವ ಸೂತ್ರಗಳಲ್ಲಿ ಮುಖ್ಯವಾಗಿ ಗಸ್ತು ಹಾಕುವ ಅಧಿಕಾರ ಮತ್ತು ಗಸ್ತು ಹಾಕುವ ಕ್ಷಮತೆ ಇದಾಗಿದೆ. ಇಂದು ಚೀನಾದ ಜೊತೆಗೆ ನಮ್ಮ ಸಂಬಂಧ ಸಹಜವಾಗಿಲ್ಲ; ಕಾರಣ ಗಡಿ ಭಾಗದಲ್ಲಿನ ಶಾಂತಿ ಭಂಗವಾಗಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅದು ನಮ್ಮ ಹಿತದಲ್ಲಿ ಇಲ್ಲ ಎಂದು ಹೇಳಿದರು.
ಜೈ ಶಂಕರ್ ಮಾತು ಮುಂದುವರಿಸಿ, ರಾಜತಾಂತ್ರಿಕತೆಯು ತಾಳ್ಮೆಯ ಕೆಲಸವಾಗಿದೆ, ನನ್ನ ಪ್ರಕಾರ, ಸಂಬಂಧ ಸಹಜ ಸ್ಥಿತಿಗೆ ಬರಬೇಕು ಅಂದರೆ ನಾವು ಆ ಸಮಸ್ಯೆಗಳನ್ನು ಪರಿಹರಿಸಬೇಕು. ಮೇ ೨೦೨೦ ರಿಂದ ಭಾರತ ಮತ್ತು ಚೀನಾ ಇವರ ಸೈನ್ಯದಲ್ಲಿ ಸಂಘರ್ಷ ನಡೆಯುತ್ತಿದೆ. ಇಲ್ಲಿಯವರೆಗೆ ಗಡಿವಾದಕ್ಕೆ ಸಂಪೂರ್ಣ ಪರಿಹಾರವಾಗಿಲ್ಲ. ಜೂನ್ ೨೦೨೦ ರಲ್ಲಿ ಗಲವಾನ ಕಣಿವೆಯಲ್ಲಿ ನಡೆದಿರುವ ಭಯಂಕರ ಚಕಮಕಿಯ ನಂತರ ಎರಡು ದೇಶದಲ್ಲಿನ ಸಂಬಂಧ ಬಹಳ ಒತ್ತಡಪೂರಿತವಾಗಿವೆ. ಆದರೂ ಎರಡು ಕಡೆಯಿಂದ ಸಂಘರ್ಷದ ಅನೇಕ ಅಂಶಗಳಿಂದ ಹಿಂದೆ ಸರಿದಿದ್ದಾರೆ. ಗಡಿಯಲ್ಲಿ ಶಾಂತಿ ಸ್ಥಾಪಿಸಲು ಸಂಬಂಧ ಸಾಮಾನ್ಯ ಗೊಳಿಸುವುದು ಅವಶ್ಯಕವಾಗಿರುವುದು ಎಂದು ಭಾರತ ನಿರಂತರವಾಗಿ ಹೇಳುತ್ತಿದೆ.
‘ಭಾರತ-ಪಶ್ಚಿಮ ಏಷ್ಯಾ-ಯುರೋಪ್ ಎಕಾನಾಮಿಕ್ ಕಾರಿಡಾರ್’ರ ಕೆಲಸದಲ್ಲಿ ಆಗುವ ವಿಳಂಬ ಇದು ಖಂಡಿತವಾಗಿಯೂ ಚಿಂತೆಯ ವಿಷಯವೆ !
ಜಿ -20 ಸಭೆಯಲ್ಲಿ ನಿಶ್ಚಯಿಸಿರುವ ‘ಭಾರತ ಪಶ್ಚಿಮ ಏಷ್ಯಾ ಯುರೋಪ್ ಎಕನಾಮಿಕ್ ಕಾರಿಡಾರ್’ ವಿಷಯ ಕೂಡ ಈ ಸಮಯದಲ್ಲಿ ವಿದೇಶಾಂಗ ಸಚಿವರು ಚರ್ಚಿಸಿದರು. ಅವರು, ಈ ಯೋಜನೆಯನ್ನು ಜಾರಿಗೆ ತರುವಲ್ಲಿ ತಡವಾಗುತ್ತಿದೆ ಇದು ಪಶ್ಚಿಮ ಏಷ್ಯಾದಲ್ಲಿನ ಸದ್ಯದ ಪರಿಸ್ಥಿತಿ ಮತ್ತು ಈ ಯೋಜನೆಯ ನಂತರ ನಿರ್ಮಾಣವಾಗುವ ಅಪೇಕ್ಷೆ ಗಮನಿಸಿದರೆ ಚಿಂತೆಯ ವಿಷಯವಾಗಿದೆ. ಯೋಜನೆಗೆ ಸಂಬಂಧಿಸಿದ ಎಲ್ಲಾ ಪಾಲುದಾರರು ಕಟಿಬದ್ಧರಾಗಿದ್ದಾರೆ; ಕಾರಣ ಇದು ಒಂದು ಒಳ್ಳೆಯ ಉಪಕ್ರಮ ಎಂದು ನಂಬಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಈಗ ನಡೆಯುತ್ತಿರುವ ಸಂಕಷ್ಟದಿಂದ ಯೋಜನೆಗೆ ಕೆಲವು ವರ್ಷ ವಿಳಂಬವಾಗುವುದೇ ಎಂದು ಕೇಳಿದಾಗ ಅವರು, ಇದು ನಮಗಾಗಿ ಖಂಡಿತವಾಗಿಯೂ ಚಿಂತೆಯ ವಿಷಯವಾಗಿದೆ ಮತ್ತು ಸಪ್ಟೆಂಬರ್ ೨೦೨೩ ರಲ್ಲಿ ಒಪ್ಪಂದದ ಮೇಲೆ ಸಹಿ ಹಾಕುವಾಗ ನಮಗೆ ಅಪೇಕ್ಷೆಗಳು ಇದ್ದವು, ಅದರಲ್ಲಿ ಈಗ ಕೆಲವು ಬದಲಾವಣೆ ಮಾಡಬೇಕಾಗುತ್ತದೆ ಎಂದು ಹೇಳಿದರು.