‘ಭಾರತದ ಒಸಾಮಾ ಬಿನ್ ಲಾಡೆನ್’ ಎಂದೇ ಪರಿಚಿತ !
ನವದೆಹಲಿ – 2010 ರಲ್ಲಿ ಸರಕಾರವು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟ ಇಂಡಿಯನ ಮುಜಾಹಿದ್ದೀನ ಸಹ ಸಂಸ್ಥಾಪಕ ಅಬ್ದುಲ ಸುಭಾನ ಖುರೇಷಿಗೆ ದೆಹಲಿ ನ್ಯಾಯಾಲಯದಿಂದ ಜಾಮೀನು ನೀಡಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕೇವಲ ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ಭಾರತೀಯ ದಂಡ ಕಲಂ 436-A ಅಡಿಯಲ್ಲಿ ಪರಿಹಾರವನ್ನು ನಿರಾಕರಿಸುವ ಏಕೈಕ ಕಾರಣವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಮತ್ತು ನ್ಯಾಯಮೂರ್ತಿ ಮನೋಜ ಜೈನ್ ಅವರಿದ್ದ ಪೀಠವು, “ಪ್ರಕರಣದ ಎಲ್ಲಾ ಸಂಗತಿಗಳು ಮತ್ತು ಸಂದರ್ಭಗಳು ಮತ್ತು ಅರ್ಜಿದಾರರು ಈಗಾಗಲೇ ಜೈಲಿನಲ್ಲಿ ಕಳೆದ ಸಮಯವನ್ನು ಪರಿಗಣಿಸಿ ನಾವು ಜಾಮೀನು ನೀಡುತ್ತಿದ್ದೇವೆ” ಎಂದು ಹೇಳಿದರು. ಖುರೇಷಿಯನ್ನು 2019ರಲ್ಲಿ ಬಂಧಿಸಲಾಗಿತ್ತು. ಅವನ ವಿರುದ್ಧದ ಆರೋಪಗಳು ಗರಿಷ್ಠ 5 ವರ್ಷಗಳ ಶಿಕ್ಷೆಗೆ ಅರ್ಹವಾಗಿತ್ತು. ಈ ಕಾಲಾವಧಿ ಪೂರ್ಣಗೊಳ್ಳಲಿದ್ದ ಕಾರಣ ಜಾಮೀನು ಮಂಜೂರು ಮಾಡಿರುವುದನ್ನು ಈ ಬಾರಿ ನ್ಯಾಯಾಲಯವು ಉಲ್ಲೇಖಿಸಿದೆ.
ಅಬ್ದುಲ ಸುಭಾನ ಖುರೇಷಿ ಯಾರು ?
ಈಗಾಗಲೇ ನಿಷೇಧಿಸಿದ್ದ ಭಯೋತ್ಪಾದಕ ಸಂಘಟನೆ ಸಿಮಿ ಈ ಸಂಘಟನೆಯಿಂದ ಪುಸ್ತಕಗಳು ಅಥವಾ ವಿಷಯಗಳು ಪ್ರಕಟವಾಗುತ್ತಿದ್ದವು. ಖುರೇಷಿ ಆ ಪ್ರಕಟಣೆಗಳ ಸಂಪಾದಕರಾಗಿದ್ದನು. ದೆಹಲಿ ಪೊಲೀಸರ ಪ್ರಕಾರ, ಅವನು ಇಂಡಿಯನ ಮುಜಾಹಿದೀನ್‌ನ ಸಹ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದನು. ಈ ಭಯೋತ್ಪಾದಕ ಸಂಘಟನೆಯ ಉದ್ದೇಶ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವುದಾಗಿತ್ತು. 2010 ರಲ್ಲಿ ಇಂಡಿಯನ ಮುಜಾಹಿದ್ದೀನ ಅನ್ನು ನಿಷೇಧಿಸಿದಾಗ, ಖುರೇಷಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಸೇರಿಕೊಂಡನು. ಈ ಸಂಘಟನೆ 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಬಯಸುತ್ತದೆ. ಸರಕಾರ ಈಗ ಅದನ್ನೂ ನಿಷೇಧಿಸಿದೆ.