|
ಕರ್ಣಾವತಿ (ಗುಜರಾತ) – ಗುಜರಾತಿನ ಪ್ರೇರಣಾ ಪೀಠ ನಿಷ್ಕಳಂಕಿ ದೇವಸ್ಥಾನದ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಅವರು ದೇವಿ ದೇವತೆಯರ ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲಿನ ಪಿರಾನಾದಲ್ಲಿರುವ ಈ ದೇವಸ್ಥಾನದ ಮೇಲೆ ನಡೆದಿರುವ ದಾಳಿಯ ವಿಡಿಯೋ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಮುಸಲ್ಮಾನರ ಗುಂಪೊಂದು ಟೋಪಿಗಳನ್ನು ಧರಿಸಿ ದೇವಸ್ಥಾನದ ಮೇಲೆ ಲಾಠಿ ಕೋಲುಗಳಿಂದ ದಾಳಿ ನಡೆಸಿದ್ದಾರೆ. ಈ ದಾಳಿ ಪೂರ್ವ ನಿಯೋಜಿತವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿಕೆ ನೀಡಿದೆ.
ಈ ಸ್ಥಳಕ್ಕಾಗಿ ಅನೇಕ ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಮುಸಲ್ಮಾನರು ದೇವಸ್ಥಾನದ ಈ ಜಾಗವನ್ನು ತಮ್ಮ ದರ್ಗಾ ಭೂಮಿ ಎಂದು ದಾವೆ ಮಾಡಿದ್ದರು. ಆದರೆ ಈ ಸ್ಥಳದಲ್ಲಿ ಮೂಲವಾಗಿ ಮಂದಿರ ಇರುವುದಾಗಿ ಹಿಂದೂಗಳ ಶ್ರದ್ಧೆಯಾಗಿದೆ. ಈ ಪ್ರದೇಶದಿಂದ ಕೆಲವು ಗೋರಿಗಳು ತೆರವುಗೊಳಿಸಿರುವ ವದಂತಿ ಹರಡಿತ್ತು. ಇದರಿಂದ ಸ್ಥಳೀಯ ಮುಸಲ್ಮಾನರು ರೊಚ್ಚಿಗೆದ್ದು ಲಾಠಿಗಳು ಮತ್ತು ಕಬ್ಬಿಣದ ಸಲಾಕೆ ತೆಗೆದುಕೊಂಡು ದೇವಸ್ಥಾನದ ಮೇಲೆ ದಾಳಿ ನಡೆಸಿದರು. ಈ ದಾಳಿಯ ವಿಡಿಯೋ ವಿಶ್ವ ಹಿಂದೂ ಪರಿಷತ್ ತನ್ನ instagram ಖಾತೆಯಲ್ಲಿ ಪ್ರಸಾರ ಮಾಡಿದೆ.
Gujarat Temple Attack: In Karnavati (Gujarat) fanatical Mu$!ims attack a Hindu temple !
Demolition of vigrahas of deities!
Attack due to rumors of demolition of tombs in the area!
Is this India or Pakistan to attack Hindu temples and demolish the idols of deities ?
In… pic.twitter.com/C0nhwJsmUI
— Sanatan Prabhat (@SanatanPrabhat) May 9, 2024
ಏನು ಈ ಪ್ರಕರಣ ?
ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ .೨೦೨೨ ರಲ್ಲಿ ಇಮಾಮ್ ಶಾಹ ದರ್ಗಾ ಟ್ರಸ್ಟ್ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರ ದಾಖಲಿಸಲಾಗಿತ್ತು. ಆ ಪ್ರತಿಜ್ಞಾ ಪತ್ರದಲ್ಲಿ ಈ ಭೂಭಾಗ ಹಿಂದೂಗಳ ಧಾರ್ಮಿಕ ಸ್ಥಳವಾಗಿದ್ದು, ಅಲ್ಲಿನ ಸಂಸ್ಥೆ ಸತಪಂಥಿಗಳದ್ದಾಗಿದೆ ಎಂದು ಬರೆದಿದೆ. ಸತಪಂಥ ಎಂಬುದು ಮುಸಲ್ಮಾನರ ಒಂದು ಪಂಥ ಎಂದು ನಂಬಲಾಗಿದೆ.
ಇಮಾಮ್ ಶಾಹ ಟ್ರಸ್ಟಿನಿಂದ ಪ್ರತಿಜ್ಞಾಪತ್ರ ಪ್ರಸ್ತುತಪಡಿಸುವಾಗ, ಪಿರಾನಾದಲ್ಲಿ ೬೦೦ ವರ್ಷಗಳ ಹಳೆಯ ಮಸೀದಿ, ದರ್ಗಾ ಮತ್ತು ದೇವಸ್ಥಾನ ಇದೆ. ಈ ಜಾಗ ಮೂಲತಃ ಮುಸಲ್ಮಾನರ ಸಂಸ್ಥೆ ಮತ್ತು ಹಿಂದೂ ಧಾರ್ಮಿಕ ಸ್ಥಳವಾಗಿದೆ ಎಂದು ಹೇಳುವುದು ಯೋಗ್ಯವಲ್ಲ. ಟ್ರಸ್ಟಿನ ಸದಸ್ಯರಲ್ಲಿ ಹಿಂದೂ ಮತ್ತು ಮುಸಲ್ಮಾನ ಹೀಗೆ ಎರಡೂ ಸಮುದಾಯದ ಜನರ ಸಮಾವೇಶ ಇರುವುದಾಗಿ ಕೂಡ ಹೇಳಲಾಗಿದೆ.
ಸಂಪಾದಕೀಯ ನಿಲುವು
|