Uttarakhand Forest Fire : ಉತ್ತರಾಖಂಡದ ಕಾಡ್ಗಿಚ್ಚಿನಿಂದ ಪರಿಸರ ಬಿಕ್ಕಟ್ಟಿನಲ್ಲಿ!

ಡೆಹ್ರಾಡೂನ್ (ಉತ್ತರಾಖಂಡ) – ಬೇಸಿಗೆಯು ಉತ್ತುಂಗವನ್ನು ತಲುಪುತ್ತಿದ್ದಂತೆ ಉತ್ತರಾಖಂಡದ ಅರಣ್ಯದಲ್ಲಿನ ಬೆಂಕಿಯ ಪ್ರಮಾಣವು (ಕಾಡ್ಗಿಚ್ಚು) ತೀವ್ರಗೊಳ್ಳುತ್ತಿದೆ. ಕಾಡ್ಗಿಚ್ಚಿನಿಂದಾಗಿ ಕಪ್ಪು ಮೋಡಗಳು ನಿರ್ಮಾಣವಾಗಿವೆ. ಈ ಕಪ್ಪು ಇಂಗಾಲದಿಂದಾಗಿ ಪರಿಸರ ಸಂಕಷ್ಟಕ್ಕೆ ಸಿಲುಕಿದೆ. ಜನರು ಉಸಿರಾಟದಂತಹ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಅಗ್ನಿಯ ಅವಘಡಗಳಲ್ಲಿ ಉತ್ತರಾಖಂಡ ಮುಂಚೂಣಿಯಲ್ಲಿದೆ !

ಕಾಡ್ಗಿಚ್ಚಿನ ಘಟನೆಗಳಲ್ಲಿ ಉತ್ತರಾಖಂಡ ಮುಂಚೂಣಿಯಲ್ಲಿದೆ. ಉತ್ತರಾಖಂಡದಲ್ಲಿ 7 ದಿನಗಳಲ್ಲಿ 4,500 ಕ್ಕೂ ಅಧಿಕ ‘ಫ್ಯಯರ್ ಅಲರ್ಟ್'(ಬೆಂಕಿ ಹರಡುವ ಮುನ್ನ ಕಳುಹಿಸುವ ಅಗ್ನಿಶಾಮಕ ಎಚ್ಚರಿಕೆ)ಗಳನ್ನು ಕಳುಹಿಸಲಾಗಿದೆ. ಈ ಕಾಲಾವಧಿಯಲ್ಲಿ ಉತ್ತರಾಖಂಡವು (ಅರಣ್ಯದಲ್ಲಿ ಬೆಂಕಿಯ) ಕಾಡ್ಗಿಚ್ಚಿನ ಅತಿ ಹೆಚ್ಚು 350 ಗಂಭೀರ ಘಟನೆಗಳನ್ನು ದಾಖಲಿಸಿದೆ.

ಕಾಡ್ಗಿಚ್ಚು ಇಂಗಾಲದ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಕಾಡುಗಳು ಸುಟ್ಟುಹೋಗುವ ಭೂಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಮತ್ತು ಕಪ್ಪು ಇಂಗಾಲ ಸೇರಿದಂತೆ ಇತರ ಮಾಲಿನ್ಯಕಾರಕಗಳು ಹೊರಬೀಳುತ್ತವೆ. ಅರ್ಧ ಸುಟ್ಟಿರುವ ಇಂಗಾಲ ಅಂದರೆ ಕಪ್ಪು ಇಂಗಾಲವಾಗಿದೆ. ಇದರಿಂದ ವಾಯುವಿನ ಗುಣಮಟ್ಟ ಮತ್ತು ಹವಾಮಾನದ ಮೇಲೆ ವಿಪರೀತ ಪರಿಣಾಮ ಬೀರುತ್ತ