ಮಲಪ್ಪುರಂ, ಕೋಳಿಕೋಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಎಚ್ಚರಿಕೆ
ನವದೆಹಲಿ – ರಾಜ್ಯದ 3 ಜಿಲ್ಲೆಗಳಲ್ಲಿ ‘ವೆಸ್ಟ ನೈಲ್’ ಜ್ವರ ಹರಡುವ ಕುರಿತು ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಮಲಪ್ಪುರಂ, ಕೋಳಿಕೋಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಈ ಜ್ವರದ ಪ್ರಕರಣಗಳು ವರದಿಯಾಗಿದ್ದು, ಈ ಜ್ವರವನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಸಹ ಪ್ರಸಾರ ಮಾಡಲಾಗಿದೆ. ರಾಜ್ಯದ ಎಲ್ಲ ಸ್ಥಳೀಯ ಆಡಳಿತಗಳಿಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಇಲಾಖೆ ಸೂಚಿಸಿದೆ.
ಯಾರಿಗಾದರೂ ಈ ವೈರಾಣುವಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ವೈರಸ್ ಡೆಂಗ್ಯೂಗೆ ಹೋಲುತ್ತದೆ ಮತ್ತು ಭಯಪಡುವ ಅಗತ್ಯವಿಲ್ಲ. ಈವರೆಗೆ 5 ಪ್ರಕರಣಗಳು ವರದಿಯಾಗಿದ್ದು, ಅವರಲ್ಲಿ 4 ಮಂದಿ ಗುಣಮುಖರಾಗಿದ್ದಾರೆ.
ಏನಿದು ‘ವೆಸ್ಟ್ ನೈಲ್’ ಜ್ವರ ?
ಈ ರೋಗ ಸೊಳ್ಳೆಗಳಿಂದ ಹರಡುತ್ತದೆ. ಇದರ ಮುಖ್ಯ ಲಕ್ಷಣಗಳು ತಲೆನೋವು, ಜ್ವರ, ಸ್ನಾಯು ನೋವು, ತಲೆತಿರುಗುವಿಕೆ ಇತ್ಯಾದಿ. ಈ ಕಾಯಿಲೆಗೆ ಔಷಧಿ ಇಲ್ಲದ ಕಾರಣ ನಿಯಂತ್ರಣದಲ್ಲಿ ತರುವುದು ಸೂಕ್ತವಾಗಿದೆ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ವ್ಯಕ್ತಿಯ ಮೆದುಳಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಅದು ಸಾವಿಗೆ ಕಾರಣವಾಗಬಹುದು.
West Nile fever: Kerala on alert, health department orders to ramp up pre-monsoon cleaning activities
Read @ANI Story | https://t.co/W6JYCC9ff6#WestNileFever #Kerala pic.twitter.com/FC7NpiYxtV
— ANI Digital (@ani_digital) May 8, 2024