ಮುಸಲ್ಮಾನರು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ! – ಪ್ರಧಾನಿ ಮೋದಿ

  • ಕಾಂಗ್ರೆಸ್ಸಿನ ಕಾಲದಲ್ಲಿ ನಿಮಗೆ ಸರಕಾರಿ ವ್ಯವಸ್ಥೆಯ ಲಾಭ ಏಕೆ ಸಿಗಲಿಲ್ಲ ? ಯೋಚನೆ ಮಾಡಿ ! – ಪ್ರಧಾನಮಂತ್ರಿ

  • ಪ್ರಧಾನಿ ಮೋದಿ ಇವರಿಂದ ಮುಸಲ್ಮಾನರಿಗೆ ಕರೆ !

ನವ ದೆಹಲಿ – ನಾನು ಇದೇ ಮೊದಲ ಬಾರಿಗೆ ಇದನ್ನು ಹೇಳುತ್ತಿದ್ದೇನೆ. ನಾನು ಮುಸಲ್ಮಾನ ಸಮಾಜದಲ್ಲಿನ ಸುಶಿಕ್ಷಿತ ಜನರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಹೇಳುತ್ತಿದ್ದೇನೆ. ದೇಶ ಎಷ್ಟು ಪ್ರಗತಿ ಸಾಧಿಸಿದೆ. ಒಂದು ವೇಳೆ ನಿಮ್ಮ ಸಮಾಜದಲ್ಲಿ ಕೊರತೆ ಕಾಣುತ್ತಿದ್ದರೆ, ಇದಕ್ಕೇನು ಕಾರಣ ಎಂದು ಯೋಚಿಸಿ ! ನಿಮಗೆ ಕಾಂಗ್ರೆಸ್ಸಿನ ಆಡಳಿತ ಕಾಲದಲ್ಲಿ ಸರಕಾರಿ ವ್ಯವಸ್ಥೆಯ ಲಾಭ ಏಕೆ ಸಿಗಲಿಲ್ಲವೆಂದು ಒಮ್ಮೆ ಆತ್ಮಾವಲೋಕನ ಮಾಡಿ ನಿರ್ಣಯ ತೆಗೆದುಕೊಳ್ಳಿ ! ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಒಂದು ಹಿಂದಿ ವಾರ್ತಾ ವಾಹಿನಿಯೊಂದಿಗೆ ನಡೆಸಿದ ವಿಶೇಷ ಸಂವಾದದಲ್ಲಿ ಹೇಳಿದರು.

ಪ್ರಧಾನ ಮಂತ್ರಿ ಮೋದಿ ಇವರು ಮಾತು ಮುಂದುವರೆಸುತ್ತಾ,

೧. ೨೦೦೨ ಕ್ಕಿಂತ ಮೊದಲು ಪ್ರತಿ ೧೦ ವರ್ಷಗಳಲ್ಲಿ ೭ ವರ್ಷವಾದರೂ ಗುಜರಾತ್‌ನಲ್ಲಿ ಗಲಭೆಗಳಾಗುತ್ತಿದ್ದವು; ಆದರೆ ೨೦೦೨ ರ ನಂತರ ಗುಜರಾತ್‌ನಲ್ಲಿ ಒಂದೇ ಒಂದು ಗಲಭೆ ಕೂಡ ನಡೆದಿಲ್ಲ.
೨. ಅಂತರಾಷ್ಟ್ರೀಯ ಮಟ್ಟದಲ್ಲಿ ಮುಸಲ್ಮಾನ ಜನಾಂಗದಲ್ಲಿ ಬದಲಾವಣೆ ಆಗುತ್ತಿದೆ. ಇಂದು ನಾನು ಕೊಲ್ಲಿ ರಾಷ್ಟ್ರಗಳಿಗೆ ಹೋಗುತ್ತೇನೆ. ನನಗೆ ವೈಯಕ್ತಿಕವಾಗಿ ಅಲ್ಲಿ ಬಹಳಷ್ಟು ಗೌರವ ಸಿಗುತ್ತದೆ ಮತ್ತು ಭಾರತಕ್ಕೂ ಸಿಗುತ್ತದೆ. ‘ಯೋಗ’ ಇದು ಸೌದಿ ಅರೇಬಿಯಾದಲ್ಲಿ ಅಧಿಕೃತ ಪಠ್ಯಕ್ರಮದ ವಿಷಯವಾಗಿದೆ. ನಾನು ಭಾರತದಲ್ಲಿ ಯೋಗದ ಬಗ್ಗೆ ಮಾತನಾಡಿದರೆ ನೀವು, ಮೋದಿ ಮುಸಲ್ಮಾನ ವಿರೋಧಿಯಾಗಿದ್ದಾರೆ !’ ಎಂದು ಹೇಳುತ್ತೀರಿ.
೩. ಯಾವುದೇ ಜನಾಂಗ ಕೂಲಿಗಳ ಹಾಗೆ ಬದುಕಬೇಕೆಂಬ ಇಚ್ಛೆ ನನಗೆ ಇಲ್ಲ.
೪. ನಾವು ಇಸ್ಲಾಂನ ಅಥವಾ ಮುಸಲ್ಮಾನರ ವಿರೋಧದಲ್ಲಿ ಇಲ್ಲ ! ಯಾವಾಗ ನಾನು ತ್ರಿವಳಿ ತಲಾಕ್ ರದ್ದು ಪಡಿಸುವ ಕಾನೂನು ಜಾರಿಗೊಳಿಸಿದೆನೊ, ಆಗ ಮುಸಲ್ಮಾನ ಸಹೋದರಿಯರಿಗೆ ನಾನು ನಿಜವಾಗಿ ಕೆಲಸ ಮಾಡುವ ಮನುಷ್ಯನಾಗಿದ್ದೇನೆ’, ಎಂದು ಅನಿಸಿತು. ಯಾವಾಗ ನಾನು ಕೊರೋನಾ ತಡೆಗಟ್ಟುವ ಲಸಿಕೆಯನ್ನು ತಂದೆನೋ ಆಗಲೂ ಕೂಡ ಜನರಿಗೆ ಹಾಗೇ ಅನಿಸಿತು. ನಾವು ಯಾರೊಂದಿಗೂ ಭೇದ ಭಾವ ಮಾಡುವುದಿಲ್ಲ ಎಂದು ಹೇಳಿದರು.