ರಾಯಪುರ – ಕಾಂಗ್ರೆಸ್ ವಕ್ತಾರ ರಾಧಿಕಾ ಖೇಡಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಭಾಜಪ ಸೇರಿದ್ದಾರೆ. ಭಾಜಪದಲ್ಲಿ ಸೇರಿದ ಬಳಿಕ ಮಾತನಾಡಿದ ಅವರು, ”ನಾನು ರಾಮನ ಭಕ್ತೆಯಾಗಿದ್ದರಿಂದ ಶ್ರೀ ರಾಮಲಲ್ಲಾನ ದರ್ಶನ ಪಡೆದೆನು. ಆ ನಂತರ ಕೌಶಲ್ಯ ಮಾತೆಯ ಭೂಮಿಯೆಂದು ಗುರುತಿಸಲ್ಪಡುವ ಛತ್ತೀಸ್‌ಗಢದಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಇಂದಿನ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ಅಲ್ಲ, ಅದು ಶ್ರೀರಾಮ ವಿರೋಧಿ ಮತ್ತು ಹಿಂದೂ ವಿರೋಧಿಯಾಗಿದೆ.” ಎಂದು ಹೇಳಿದರು.
Today’s Congress is against Shri Ram and anti-Hindu.
– Radhika Khera, Former Spokesperson, #Congress.
राधिका खेडा pic.twitter.com/wLyBE8KeWK
— Sanatan Prabhat (@SanatanPrabhat) May 7, 2024
ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ರಾಧಿಕಾ ಖೇಡಾ ಇವರು ಮಾತನಾಡಿ, ಛತ್ತೀಸ್‌ಗಢ ಕಾಂಗ್ರೆಸ್ ವಕ್ತಾರ ಸುಶೀಲ್ ಆನಂದ್ ಶುಕ್ಲಾ ಇವರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ರಾಯಪುರದ ಪಕ್ಷದ ಕಚೇರಿಯಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರು. ಈ ಬಗ್ಗೆ ಪಕ್ಷದ ಹಿರಿಯ ನಾಯಕರಿಗೆ ಮಾಹಿತಿ ನೀಡಿದರೂ ಆರೋಪಿ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲವೆಂದು ಹೇಳಿದ್ದಾರೆ.