ಸ್ವಲ್ಪ ಅಂತರದಲ್ಲಿ ನಡೆಯಲಿತ್ತು ತೃಣಮೂಲ ಕಾಂಗ್ರೆಸ್ಸಿನ ಸಂಸದ ಅಭಿಷೇಕ ಬ್ಯಾನರ್ಜಿ ಇವರ ಪ್ರಚಾರ ಸಭೆ !

ಕೋಲಕಾತಾ (ಬಂಗಾಲ) – ರಾಜ್ಯದ ಹುಗಳಿ ಜಿಲ್ಲೆಯಲ್ಲಿನ ಪಾಂಡುವಾ ಪ್ರದೇಶದಲ್ಲಿ ಮೇ ೬ ರಂದು ಬೆಳಿಗ್ಗೆ ಬಾಂಬ್ ಸ್ಫೋಟ್ ಆಗಿರುವ ಸಮಾಚಾರವಿದೆ. ಇದರಲ್ಲಿ ಒಂದು ಚಿಕ್ಕ ಹುಡುಗನು ಸಾವನ್ನಪ್ಪಿದ್ದು, ಇತರ ಇಬ್ಬರು ಹುಡುಗರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಆರೋಗ್ಯ ಚಿಂತಾ ಜನಕವಾಗಿದೆ. ಗಾಯಾಳುಗಳಲ್ಲಿ ಓರ್ವನ ಬಲಗೈ ನಿಷ್ಕ್ರಿಯವಾಗಿರುವ ಮಾಹಿತಿ ಇದೆ. ಚಿಕ್ಕ ಹುಡುಗರಿಗೆ ಒಂದು ಸ್ಥಳದಲ್ಲಿ ಬಾಂಬ್ ಕಂಡಿತು. ಅದನ್ನು ಚೆಂಡು ಎಂದು ತಿಳಿದು ಅದರ ಜೊತೆಗೆ ಆಟ ಆಡುತ್ತಿರುವಾಗ ಸ್ಫೋಟ ಗೊಂಡಿದೆ. ತೃಣಮೂಲ ಕಾಂಗ್ರೆಸ್ಸಿನ ಸಂಸದ ಅಭಿಷೇಕ ಬ್ಯಾನರ್ಜಿ ಇವರ ಪ್ರಚಾರ ಸಭೆ ಸ್ವಲ್ಪ ಅಂತರದಲ್ಲೇ ಇರುವುದಾಗಿ ಸ್ಥಳೀಯ ಮಾಧ್ಯಮದಿಂದ ತಿಳಿದು ಬಂದಿದೆ. ಗಾಯಗೊಂಡಿರುವವರ ಹೆಸರು ರೂಪಮ ವಲ್ಲಭ ಮತ್ತು ಸೌರಭ ಚೌದರಿ ಎಂದು ಆಗಿದ್ದೂ ಅವರ ವಯಸ್ಸು ೧೧ ರಿಂದ ೧೩ ವಯಸ್ಸು ಇರುವುದಾಗಿ ಹೇಳಲಾಗುತ್ತಿದೆ.
ಸ್ಥಳೀಯ ಸೂತ್ರಗಳು ನೀಡಿರುವ ಮಾಹಿತಿಯ ಪ್ರಕಾರ ಮೇ ೬ ರಂದು ಬೆಳಿಗ್ಗೆ ೮.೩೦ ಗಂಟೆಗೆ ಪಾಂಡುವಾದ ತಿನ್ನಾ ಪ್ರದೇಶದಲ್ಲಿ ಕೆರೆಯಿಂದ ಸ್ಥಳೀಯ ನಿವಾಸಿಗಳಿಗೆ ಅನಿರೀಕ್ಷಿತ ದೊಡ್ಡ ಸ್ಫೋಟ ಆಗಿರುವ ಧ್ವನಿ ಕೇಳಿತು. ಅದರ ನಂತರ ಆ ಜನರು ಕೆರೆಯ ಹತ್ತಿರ ಓಡಿ ಹೋದಾಗ ಅವರಿಗೆ ೩ ಹುಡುಗರು ಗಂಭೀರವಾಗಿ ಗಾಯಗೊಂಡಿರುವುದು ಕಂಡುಬಂದಿತು. ಬಾಂಬ್ ಅಲ್ಲಿ ಹೇಗೆ ಬಂದಿತ್ತು ಮತ್ತು ಯಾರು ಇಟ್ಟಿದ್ದರು ? ಇದರ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಇಲ್ಲ. ಈ ಘಟನೆಯ ಇಂದ ಪರಿಸರದಲ್ಲಿ ಶೋಕದ ವಾತಾವರಣ ಆವರಿಸಿದೆ.ಅ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!