ಪೂಂಛದಲ್ಲಿ ಸೈನ್ಯದಳದ ಮೇಲೆ ನಡೆದ ಭಯೋತ್ಪಾದಕ ದಾಳಿ, ಇದು ಭಾಜಪದ ‘ಎಲೆಕ್ಷನ್ ಸ್ಟಂಟ್’ (ಅಂತೆ) – ಚರಣಜೀತ ಸಿಂಹ ಚನ್ನಿ

ಪಂಜಾಬ್‌ನ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿಯವರಿಂದ ಖೇದಕರ ಹೇಳಿಕೆ !

(ಎಲೆಕ್ಷನ್ ಸ್ಟಂಟ್ ಎಂದರೆ ಚುನಾವಣೆಯ ಹಿನ್ನೆಲೆಯಲ್ಲಿ ಜನರ ಗಮನಸೆಳೆಯಲು ಮಾಡುವ ಕೃತಿ)

ಕಾಂಗ್ರೆಸ್ಸಿನ ಹಿರಿಯ ನಾಯಕ ಚರಣಜೀತ ಸಿಂಹ ಚನ್ನಿ

ಚಂದಿಗಡ – ಪಂಜಾಬದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನ ಹಿರಿಯ ನಾಯಕ ಚರಣಜೀತ ಸಿಂಹ ಚನ್ನಿ ಇವರು ಪೂಂಛದಲ್ಲಿನ ಭಯೋತ್ಪಾದಕ ದಾಳಿಯನ್ನು ಭಾಜಪದ ‘ಎಲೆಕ್ಷನ್ ಸ್ಟಂಟ್’ ಎಂದು ಹೇಳಿದ್ದಾರೆ. ಚನ್ನಿ ಇವರು, ‘ಹಿಂದಿನ ಚುನಾವಣೆಯ ಸಮಯದಲ್ಲಿ ಇದೇ ರೀತಿ ಸ್ಟಂಟ್ ಮಾಡಿ ಭಾಜಪ ವಿಜಯ ಸಾಧಿಸಿತ್ತು. ಭಾಜಪದ ಇದು ಗೆಲುವಿಗಾಗಿ ಸ್ಟಂಟಾಗಿತ್ತು ಇದರಲ್ಲಿ ಅಸತ್ಯ ಏನು ಇಲ್ಲ ಎಂದು ಅವರು ಹೇಳಿದರು. ಜಮ್ಮು ಕಾಶ್ಮೀರದಲ್ಲಿನ ಪೂಂಛ ಜಿಲ್ಲೆಯಲ್ಲಿನ ವಾಯು ಸೇನೆಯ ವಾಹನದ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಓರ್ವ ಸೈನಿಕನು ವೀರ ಮರಣ ಹೊಂದಿದನು, ಹಾಗೂ ೪ ಸೈನಿಕರು ಗಾಯಗೊಂಡರು. ಈ ದಾಳಿಯಲ್ಲಿ ಸಹಭಾಗಿ ಆಗಿರುವ ಭಯೋತ್ಪಾದಕರ ಶೋಧ ಅಭಿಯಾನ ಮುಂದುವರೆದಿದೆ. ಈ ಪ್ರಕರಣದಲ್ಲಿ ಅನೇಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಸಂಪಾದಕೀಯ ನಿಲುವು

ಭಾರತಕ್ಕೆ ಅಸ್ಥಿರಗೊಳಿಸುವ ಭಯೋತ್ಪಾದಕರ ದಾಳಿ ತಡೆಯುವಲ್ಲಿ ನಮ್ಮ ಸೈನಿಕರು ಜೀವದ ಹಂಗು ತೊರೆದು ಅದನ್ನು ಎದುರಿಸುತ್ತಾರೆ ಮತ್ತು ದೇಶವಾಸಿಯರ ರಕ್ಷಣೆ ಮಾಡುತ್ತಾರೆ. ಹೀಗಿರುವಾಗ ಇಂತಹ ಭಯೋತ್ಪಾದಕ ದಾಳಿಯನ್ನು ಎಲೆಕ್ಷನ್ ಸ್ಟಂಟ್ ಎಂದು ಹೇಳಿ ಕಾಂಗ್ರೆಸ್ಸಿಗರು ವೀರ ಮರಣ ಹೊಂದಿರುವ ಸೈನಿಕರನ್ನು ಅವಮಾನಿಸುತ್ತಿದ್ದಾರೆ. ಇದು ದೇಶದ್ರೋಹ ಅಲ್ಲವೇ ?