Terror Attack in Poonch: ಉಗ್ರರ ದಾಳಿಯಲ್ಲಿ ಓರ್ವ ಯೋಧನ ಸಾವು, ನಾಲ್ವರಿಗೆ ಗಾಯ !

ಕಳೆದ 6 ತಿಂಗಳಲ್ಲಿ ಪೂಂಚ್‌ನಲ್ಲಿ ನಡೆದ ಮೂರನೇ ದಾಳಿ !

ಶ್ರೀನಗರ (ಜಮ್ಮು – ಕಾಶ್ಮೀರ) – ಪೂಂಛ್ ಪ್ರದೇಶದಲ್ಲಿ ಮೇ 4 ರ ಸಂಜೆ ಜಿಹಾದಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಕನಿಷ್ಠ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಹುತಾತ್ಮ ಯೋಧನನ್ನು ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಪೋರಲ್ ವಿಕ್ಕಿ ಪಹಾಡೆ ಎಂದು ಗುರುತಿಸಲಾಗಿದೆ.

ಪೂಂಛ್ ನ ಸುರನ್‌ಕೋಟ್ ಪ್ರದೇಶದಲ್ಲಿ ಎರಡು ಭದ್ರತಾ ವಾಹನಗಳು ರಸ್ತೆಯಲ್ಲಿ ಸಾಗುತ್ತಿದ್ದಾಗ 4 ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಭದ್ರತಾ ವಾಹನಗಳಲ್ಲಿ ಒಂದು ಭಾರತೀಯ ವಾಯುಸೇನೆಗೆ ಸೇರಿದ್ದಾಗಿದ್ದು, ದಾಳಿ ನಡೆಸಿದ ಬಳಿಕ ಉಗ್ರರು ಅರಣ್ಯದೊಳಗೆ ಪರಾರಿಯಾದರು. ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸಂಸ್ಥೆಗಳು ಉಗ್ರರಿಗಾಗಿ ಶೋಧ ನಡೆಸುತ್ತಿವೆ. ಪೂಂಛ್ ರಾಜೌರಿ-ಅನಂತನಾಗ್ ಲೋಕಸಭಾ ಮತದಾರರ ಕ್ಷೇತ್ರದಲ್ಲಿದ್ದು ಇಲ್ಲಿ ಮೇ 25 ರಂದು ಮತದಾನ ನಡೆಯಲಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ಪೂಂಛ್ ಪ್ರದೇಶದಲ್ಲಿ ಒಟ್ಟು 6 ಭಯೋತ್ಪಾದಕ ದಾಳಿಗಳು ನಡೆದಿದ್ದು, ಇದರಲ್ಲಿ 21 ಯೋಧರು ಹುತಾತ್ಮರಾಗಿದ್ದು, ಕಳೆದ 6 ತಿಂಗಳಲ್ಲಿ ನಡೆದ ಇದು ಮೂರನೇ ದಾಳಿಯಾಗಿದೆ.

ಜಿಹಾದಿ ಭಯೋತ್ಪಾದನೆಯ ಸೃಷ್ಟಿಕರ್ತ ಪಾಕಿಸ್ತಾನದ ಅಸ್ತಿತ್ವದಿಂದಾಗಿಯೇ ಈ ಭಯೋತ್ಪಾದಕ ಆಕ್ರಮಣಗಳು ನಡೆಯುತ್ತಿವೆ ಮತ್ತು ಅದರ ಸಂಪೂರ್ಣ ನಿರ್ಮೂಲನೆಯೇ ಮೂಲಭೂತ ಪರಿಹಾರವಾಗಿದೆ ಎಂಬುದನ್ನು ಗಮನದಲ್ಲಿಡಿ !