Pakistan Says India is Arch Rival: ಭಾರತ ನಮ್ಮ ಕಟ್ಟಾ ಪ್ರತಿಸ್ಪರ್ಧಿ! – ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮತ್ತೊಮ್ಮೆ ಭಾರತದ ವಿರುದ್ಧ ವಿಷಕಾರಿದ್ದಾರೆ. ‘ಭಾರತ ನಮ್ಮ ಪರಮ ಪ್ರತಿಸ್ಪರ್ಧಿ’ ಎಂದು ಹೇಳಿಕೆ ನೀಡಿದ್ದಾರೆ. ಜನರಲ್ ಮುನೀರ್ ಅವರು ಫೆಬ್ರವರಿ 2019 ರಲ್ಲಿ ಬಾಲಾಕೋಟ್‌ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯನ್ನು ಉಲ್ಲೇಖಿಸಿ, ನಮ್ಮ ವಾಯುಪಡೆಯು ಭಾರತೀಯ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಕಾಶ್ಮೀರಕ್ಕೆ ಪಾಕಿಸ್ತಾನ ನೈತಿಕ ಮತ್ತು ರಾಜತಾಂತ್ರಿಕ ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದೊಂದಿಗೆ ಸ್ನೇಹಕ್ಕಾಗಿ ಆಗ್ರಹಿಸುವ ಭಾರತದಲ್ಲಿರುವ ಪಾಕ್ ಪ್ರೇಮಿಗಳಿಗೆ ಇದು ಕಪಾಳಮೋಕ್ಷವೇ ಆಗಿದೆ. ಪಾಕಿಸ್ತಾನದ ಬಾಲ ಯಾವಾಗಲೂ ಡೊಂಕಾಗಿರುತ್ತದೆ. ಅದನ್ನು ಶಾಶ್ವತವಾಗಿ ಕೊನೆಗೊಳಿಸುವುದೇ ಯೋಗ್ಯವಾಗಿದೆ !