ನಕ್ಷೆಯಲ್ಲಿ ಭಾರತದ 3 ಭಾಗಗಳ ಸಮಾವೇಶ !
ಕಾಠ್ಮಂಡು (ನೇಪಾಳ) – ನೇಪಾಳ ತನ್ನ 100 ರೂಪಾಯಿ ನೋಟುಗಳ ಮೇಲೆ ದೇಶದ ಹೊಸ ನಕ್ಷೆಯನ್ನು ಮುದ್ರಿಸಲಾಗುವುದು ಎಂದು ಘೋಷಣೆ ಮಾಡಿದೆ. ಈ ನಕ್ಷೆಯಲ್ಲಿ ಲಿಪುಲೇಖ, ಲಿಂಪಿಯಾಧುರಾ ಮತ್ತು ಕಾಲಾಪಾನಿ ಎಂಬ 3 ಭಾಗಗಳ ಸಮಾವೇಶ ಮಾಡಲಾಗಿದೆ. ಈ ಮೂರು ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ. ನೇಪಾಳ ಕಳೆದ ಕೆಲವು ವರ್ಷಗಳಿಂದ ಈ ಭಾಗಗಳನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ.
1. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ 100 ರೂಪಾಯಿ ನೋಟಿನ ಮೇಲೆ ಹೊಸ ನಕ್ಷೆಯನ್ನು ಮುದ್ರಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ, ಎಂದು ಸರಕಾರದ ಸಚಿವೆ ರೇಖಾ ಶರ್ಮಾ ಮಾಹಿತಿ ನೀಡಿದ್ದಾರೆ.
2. 18 ಜೂನ್ 2020 ರಂದು, ನೇಪಾಳವು ರಾಜಕೀಯ ನಕ್ಷೆಯಲ್ಲಿ ಲಿಪುಲೇಖ, ಲಿಂಪಿಯಾಧುರಾ ಮತ್ತು ಕಲಾಪಾನಿ ಈ 3 ಭಾಗಗಳ ಸಮಾವೇಶ ಮಾಡಿತ್ತು. ಅದಕ್ಕಾಗಿ ಸಂವಿಧಾನದಲ್ಲಿ ಸಂಶೋಧನೆ ಮಾಡಲಾಗುತ್ತಿದೆ. ಈ ನಕ್ಷೆಗೆ ಭಾರತವು ಆಕ್ಷೇಪ ವ್ಯಕ್ತಪಡಿಸಿತ್ತು.